ಫೇಸ್ ರೆಕಗ್ನಿಷನ್ ವ್ಯವಸ್ಥೆಯನ್ನು ರದ್ದುಗೊಳಿಸುವುದಾಗಿ ಘೋಷಣೆ ಮಾಡಿದ ಫೇಸ್ ಬುಕ್:
ಫೋಟೊ, ವೀಡಿಯೋಗಳ ಟೆಂಪ್ಲೇಟ್ ಡಿಲೀಟ್
ವಾಷಿಂಗ್ಟನ್: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಜನಪ್ರಿಯ ಸೇವೆ ಫೇಸ್ ರೆಕಗ್ನಿಷನ್ ವ್ಯವಸ್ಥೆಯನ್ನು ರದ್ದುಗೊಳಿಸುವುದಾಗಿ ಘೋಷಣೆ ಮಾಡಿದ್ದು, ಆ ಮೂಲಕ ಲಕ್ಷಾಂತರ ಫೋಟೋ, ವಿಡಿಯೋಗಳ ಟೆಂಪ್ಲೇಟ್ ಗಳನ್ನು ಡಿಲೀಟ್ ಮಾಡುವುದಾಗಿ ಹೇಳಿದೆ.
ಫೇಸ್ ಬುಕ್ ನ ಜನಪ್ರಿಯ ಸೇವೆಗಳಲ್ಲಿ ಒಂದಾಗಿದ್ದ ಸ್ವಯಂ ಚಾಲಿತ ಮುಖ ಗುರುತಿಸುವಿಕೆ ವ್ಯವಸ್ಥೆ ಶೀಘ್ರದಲ್ಲೇ ಸ್ಥಗಿತಗೊಳ್ಳಲ್ಲಿದ್ದು, ಈ ಸೇವೆಯ ಮೂಲಕ ಫೋಟೋಗಳು ಮತ್ತು ವೀಡಿಯೊಗಳಲ್ಲಿ ಬಳಕೆದಾರರನ್ನು ಸ್ವಯಂಚಾಲಿತವಾಗಿ ಗುರುತಿಸಬಹುದಾಗಿತ್ತು.
ಆದರೆ ಇದೀಗ ಈ ಸ್ವಯಂ ಮುಖ ಗುರುತಿಸುವಿಕೆ ವ್ಯವಸ್ಥೆಯಿಂದಾಗಿ ಈ ತಂತ್ರಜ್ಞಾನದ ದುರ್ಬಳಕೆ ಕುರಿತು ವ್ಯಾಪಕ ಕಳವಳಗಳು ವ್ಯಕ್ತವಾಗಿತ್ತು. ಈ ತಂತ್ರಜ್ಞಾನದ ಬಳಕೆಯ ಬಗ್ಗೆ ಹೆಚ್ಚುತ್ತಿರುವ ಸಾಮಾಜಿಕ ಕಳವಳಗಳ ಹಿನ್ನಲೆಯಲ್ಲಿ ಫೇಸ್ ಬುಕ್ ಈ ಸೇವೆಯನ್ನು ರದ್ದುಗೊಳಿಸಲು ಮುಂದಾಗಿದೆ.