November 14, 2024

ಮಂಗಳೂರು: ಬೈಕ್‌ಗಳನ್ನು ಕಳವುಗೈದ ಆರೋಪಿ ಬಂಧನ

0


 
ಮಂಗಳೂರು: ನಗರದ ಬಂದರ್ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಬೈಕ್‌ಗಳನ್ನು ಕಳವುಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂದರ್ ಪೊಲೀಸರು ಬಂಧಿಸಿದ್ದಾರೆ.

ಕೃಷ್ಣಾಪುರ 7ನೆ ಬ್ಲಾಕ್‌ನ ಅಬ್ದುಲ್ ಖಾದರ್ ಫಹಾದ್ ಯಾನೆ ಫಹಾದ್ (25) ಬಂಧಿತ ಆರೋಪಿ.

ಅ.20ರಂದು ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರು ಮತ್ತು ಅ.31ರಂದು ನಗರದ ಜ್ಯೋತಿ ಸಮೀಪದ ಕೆಎಂಸಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಕಳವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ನ.6ರಂದು ಆರೋಪಿಯನ್ನು ನಗರದ ಕುದ್ರೋಳಿ ಸಮೀಪದ ಕಂಡತ್‌ಪಳ್ಳಿ ಎಂಬಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಎರಡು ಬೈಕ್‌ ಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.ಆರೋಪಿಯ ವಿರುದ್ಧ ಈ ಹಿಂದೆ ಉತ್ತರ ಠಾಣೆಯಲ್ಲಿ 3, ಬರ್ಕೆ ಮತ್ತು ಪೂರ್ವ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ.

ಬಂದರ್ ಠಾಣೆಯ ಇನ್‌ಸ್ಪೆಕ್ಟರ್ ಅಜ್ಮತ್ ಅಲಿ ಜಿ., ಎಸ್ಸೈ ವನಜಾಕ್ಷಿ, ಎಎಸ್ಸೈ ದಾಮೋದರ, ಎಚ್‌ಸಿಗಳಾದ ಮದನ್, ವಿನೋದ್, ಯಶವಂತ ರೈ, ಸಿಬ್ಬಂದಿಗಳಾದ ಆನಂದ, ಸಂಪತ್, ಸುನಿಲ್, ಗುರು ಅವರನ್ನು ಒಳಗೊಂಡ ತಂಡವು ಆರೋಪಿಯ ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!