5.70 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆದ Hyundais ಮತ್ತು Kia ಕಂಪನಿ
ವಾಷಿಂಗ್ಟನ್: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹುಂಡೈ ಮೋಟರ್ಸ್ (Hyundais Motors) ಮತ್ತು ಕಿಯಾ ಕಾರ್ಪೋರೇಷನ್ (Kia Corporation) ಕಂಪನಿಗಳು 5.70 ಲಕ್ಷಕ್ಕೂ ಹೆಚ್ಚು ಕಾರುಗಳನ್ನ ಹಿಂಪಡೆದಿವೆ. ಆದರೆ ಇದು ಭಾರತದಲ್ಲಿ ಅಲ್ಲ ಅಮೆರಿಕದಲ್ಲಿ.
ವಾಹನಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕಾರುಗಳನ್ನ ಆಫ್ ಮಾಡಿದ ಸಂದರ್ಭದಲ್ಲೂ ಈ ಸಮಸ್ಯೆ ಎದುರಾಗುತ್ತಿರುವುದರಿಂದ ವಾಹನ ಹೊಂದಿರುವ ಗ್ರಾಹಕರು ಮನೆಯಿಂದ ಸ್ವಲ್ಪ ದೂರದಲ್ಲಿ ಅಥವಾ ಹೊರಗಡೆ ಪಾರ್ಕಿಂಗ್ ಮಾಡುವಂತೆ ಯುಎಸ್ ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತ (NHTSA) ತಿಳಿಸಿದೆ.