ಐಶಾರಾಮಿ ಕ್ರೂಸ್ ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ: ಶಾರುಖ್ ಖಾನ್ ಪುತ್ರನಿಗೆ ಕ್ಲೀನ್ ಚಿಟ್ ನೀಡಿದ ಎನ್ಸಿಬಿ

ಮುಂಬಯಿ: ಐಶಾರಾಮಿ ಕ್ರೂಸ್ ಹಡಗಿನಲ್ಲಿನ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಇತರ 5 ಪ್ರಕರಣಗಳ ಕುರಿತು ಎನ್ ಸಿಬಿ ಶುಕ್ರವಾರ (ಮೇ 27) ಕ್ಲೀನ್ ಚಿಟ್ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಐಶಾರಾಮಿ ಕ್ರೂಸ್ ಹಡಗಿನಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್ ಹಾಗೂ ಸ್ನೇಹಿತರಾದ ಅರ್ಬಾಜ್ ಮರ್ಚಂಟ್ ಮತ್ತು ಫ್ಯಾಷನ್ ಡಿಸೈನರ್ ಮುನ್ಮೂನ್ ಧಮೇಚಾ ಡ್ರಗ್ಸ್ ಪಾರ್ಟಿ ಮಾಡಿರುವುದಾಗಿ ಆರೋಪಿಸಿ ಬಂಧಿಸಲಾಗಿತ್ತು.
ಕಳೆದ ವರ್ಷ ಮುಂಬಯಿಯ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ನಿಗ್ರಹ ದಳ ಸುಮಾರು 6,000 ಪುಟಗಳ ಆರೋಪಪಟ್ಟಿಯನ್ನು ಎನ್ ಸಿಬಿ ಕೋರ್ಟ್ ಗೆ ಸಲ್ಲಿಸಿತ್ತು. ಇದರಲ್ಲಿ 14 ಮಂದಿ ಆರೋಪಿಗಳನ್ನು ಹೆಸರಿಸಲಾಗಿತ್ತು.