March 20, 2026

ಐಪಿಎಲ್‌ ಪದಾರ್ಪಣೆ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ 14 ವರ್ಷದ ವೈಭವ್ ಸೂರ್ಯವಂಶಿ

0
IMG-20250419-WA0010.jpg

ಜೈಪುರ್‌: ರಾಜಸ್ಥಾನ್‌ ರಾಯಲ್ಸ್‌ ತಂಡದ ವೈಭವ್‌ ಸೂರ್ಯವಂಶಿ ಐಪಿಎಲ್‌ ಆಡಿದ ಅತೀ ಕಿರಿಯ ಆಟಗಾರನೆಂಬ ದಾಖಲೆ ಬರೆದಿದ್ದಾರೆ. ಶನಿವಾರ ಲಕ್ನೋ ವಿರುದ್ಧ ಐಪಿಎಲ್‌ ಪದಾರ್ಪಣೆ ಮಾಡಿದ ವೇಳೆ ಸೂರ್ಯವಂಶಿ ವಯಸ್ಸು 14 ವರ್ಷ, 23 ದಿನ. ಐಪಿಎಲ್‌ ಆರಂಭಗೊಂಡ ಬಳಿಕ ಐಪಿಎಲ್‌ ಆಡಿದ ಮೊದಲ ಆಟಗಾರನೆಂಬುದು ಸೂರ್ಯವಂಶಿ ಪಾಲಿನ ಇನ್ನೊಂದು ಹೆಗ್ಗಳಿಕೆ. ಅವರು ಇಂಪ್ಯಾಕ್ಟ್ ಸಬ್‌ ಆಗಿ ಕಾಣಿಸಿಕೊಂಡರು.

ಐಪಿಎಲ್‌ ಆಡಿದ ಅತೀ ಕಿರಿಯ ಆಟಗಾರನೆಂಬ ಹಿಂದಿನ ದಾಖಲೆ ಆರ್‌ಸಿಬಿಯ ಪ್ರಯಾಸ್‌ ರಾಯ್‌ ಬರ್ಮನ್‌ ಹೆಸರಲ್ಲಿತ್ತು. 2019ರಲ್ಲಿ ಐಪಿಎಲ್‌ ಆಡುವಾಗ ಅವರ ವಯಸ್ಸು 16 ವರ್ಷ, 152 ದಿನವಾಗಿತ್ತು.

ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್‌ ಸಿಡಿಸಿದ ವೈಭಬ್‌, 20 ಎಸೆತದಲ್ಲಿ 2 ಬೌಂಡರಿ, 3 ಸಿಕ್ಸರ್‌ ಸಹಿತ ಸ್ಫೋಟಕ 34 ರನ್‌ ಗಳಿಸಿ ಮಾರ್ಕ್ರಮ್ ಓವರ್‌ನಲ್ಲಿ ಸ್ಟಂಪ್‌ ಔಟಾದರು. ಈ ಪಂದ್ಯಾಟದಲ್ಲಿ ರಾಜಸ್ಥಾನ ತಂಡ 2 ರನ್ ಗಳಿಂದ ಸೋಲು ಕಂಡಿದೆ.

Leave a Reply

Your email address will not be published. Required fields are marked *

error: Content is protected !!