ಬಂಟ್ವಾಳ: ಬಟ್ಟೆ ಅಂಗಡಿಯಿಂದ ಕಳ್ಳತನ ಪ್ರಕರಣ: ಆರೋಪಿಯ ಬಂಧನ
ಬಂಟ್ವಾಳ: ಬಟ್ಟೆ ಅಂಗಡಿಯೊಂದರಿಂದ ಬೀಗ ಮುರಿದು ಒಳಗೆ ನುಗ್ಗಿ ಲಕ್ಷಾಂತರ ರೂ ನಗದು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ತಂಡ ಬಂಧಿಸಿದೆ.
ಕಣ್ಣೂರು, ಅಡ್ಯಾರು ಗ್ರಾಮ, ಮಂಗಳೂರು ನಿವಾಸಿ ಆರೋಪಿ ನಝೀರ್ ಮಹಮ್ಮದ್ (26) ಎಂಬಾತ ಬಂಧಿತ ಆರೋಪಿ.
ಆತನಿಂದ ಕಳವುಗೈದ ರೂ.1,09,490/-ನಗದು ಮತ್ತು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ನ್ನು ಸ್ವಾಧೀನಪಡಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಪರಂಗಿಪೇಟೆಯಲ್ಲಿರುವ ವಿಶ್ವಾಸ ಸಿಟಿ ಸೆಂಟರ್ ನ ವೈಟ್ ಲೈನ್ ಕಿಡ್ಸ್ ವರ್ಲ್ಡ್ ಬಟ್ಟೆ ಅಂಗಡಿಗೆ ಎ. ,11 ರಂದು ರಾತ್ರಿ ಕಳ್ಳರು ಅಂಗಡಿಯ ಶಟರ್ ಗೆ ಅಳವಡಿಸಿದ ಬೀಗವನ್ನು ಮುರಿದು ಒಳಪ್ರವೇಶಿಸಿ ಕ್ಯಾಶ್ ಕೌಂಟರ್ ನಲ್ಲಿದ್ದ ನಗದನ್ನು ಕಳವುಗೈದ ಘಟನೆಗೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 42/2025 ಕಲಂ: 331(4) 305 ಬಿ.ಎನ್. ಎಸ್ ರಂತೆ ಪ್ರಕರಣ ದಾಖಲಾಗಿತ್ತು.
ಆರೋಪಿ ನಝೀರ್ ಮಹಮ್ಮದ್ ಎಂಬಾತನು ಈಗಾಗಲೇ 2024ನೇ ವರ್ಷದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು, ಕಣ್ಣೂರು ಟಿ.ವಿ.ಎಸ್ ಶೊರೂಮ್ ನ ಗಾಜು ಒಡೆದು ಹಣ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಯಾಗಿರುತ್ತಾನೆ. ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಶಿವಕುಮಾರ ಬಿ.ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿರುತ್ತಾರೆ.





