ಕಟಪಾಡಿ: ಡಿವೈಡರ್ ಮೇಲೆ ಮಗುಚಿ ಬಿದ್ದ ಕಾರು
ಕಟಪಾಡಿ : ಕಾರೊಂದು ಡಿವೈಡರ್ ಮೇಲೆ ಮಗುಚಿ ಬಿದ್ದ ಘಟನೆ ಇಂದು(ಎ.21) ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ತೇಕಲ್ ತೋಟದಲ್ಲಿ ನಡೆದಿದೆ.
ಕೊಲ್ಲೂರಿನಿಂದ ಸುಳ್ಯದತ್ತ ಕಾರು ಸಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದು, ಸಣ್ಣ ಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.





