December 15, 2025

ಉಜಿರೆಗೆ ಬಂದ ಪುನೀತ್ ಕೆರೆಹಳ್ಳಿ: ರಸ್ತೆಯಲ್ಲಿ ವಾಹನ ಅಡ್ಡ ಹಾಕಿ ವಾಪಾಸ್ಸು ಕಳುಹಿಸಿದ ಪೊಲೀಸರು

0
image_editor_output_image1742481472-1745064756673

ಬೆಳ್ತಂಗಡಿ : ಉಜಿರೆ ಕೃಷ್ಣಾನುಗ್ರಹದ ಸಭಾಭವನದಲ್ಲಿ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ಏ.19 ರಂದು ಸಂಜೆ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಕ್ರವರ್ತಿ ಸೂಲಿಬೆಲೆ ಆಗಮಿತಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮ ವೀಕ್ಷಿಸಲು ಹಿಂದೂ ಗೋ ರಕ್ಷಕ ಪುನೀತ್ ಕೆರೆಹಳ್ಳಿ ಬರುತ್ತಿದ್ದ ವೇಳೆ ಬೆಳ್ತಂಗಡಿ ಪೊಲೀಸರು ಉಜಿರೆಯ ಕಾಲೇಜ್ ರಸ್ತೆಯಲ್ಲಿ ಅಡ್ಡಹಾಕಿ ದಕ್ಷಿಣ ಕನ್ನಡ ಪ್ರವೇಶ ನಿಷೇಧ ಮಾಡಿದ ಡಿಸಿ ಆದೇಶ ತೋರಿಸಿದರು ಬಳಿಕ ವಾಪಸ್ ತೆರಳಿದ್ದಾರೆ‌.

ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆ ಏ.19 ರಂದು ಸಂಜೆ 4:15 ಕ್ಕೆ ಫಾರ್ಚೂನರ್ ಕಾರಿನಲ್ಲಿ ತನ್ನ ಸುಮಾರು 200 ಬೆಂಬಲಿಗರೊಂದಿಗೆ ಬರುತ್ತಿದ್ದಾಗ ಉಜಿರೆ ಕಾಲೇಜ್ ರಸ್ತೆಯಲ್ಲಿ ಬೆಳ್ತಂಗಡಿ ಪೊಲೀಸರು ಅಡ್ಡಹಾಕಿ ಡಿಸಿ ಆದೇಶ ತೋರಿಸಿ ಮನವರಿಕೆ ಮಾಡಿದ್ದಾರೆ ಇದರಿಂದ ವಾಪಸ್ ಹೋಗುವುದಾಗಿ ಹೇಳಿ ವಾಪಸ್ ತೆರಳಿದ ಪುನೀತ್ ಕೆರೆಹಳ್ಳಿ ಮತ್ತು ಬೆಂಬಲಿಗರು.

Leave a Reply

Your email address will not be published. Required fields are marked *

error: Content is protected !!