ಕಾರು, ಲಾರಿ ನಡುವೆ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಸಾವು

ಬೆಳಗಾವಿ: ಕಾರು ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ನಡೆದು ಸ್ಥಳದಲ್ಲಿಯೇ ಒಂದೇ ಕುಟುಂಬದ ಓರ್ವ ಮಹಿಳೆ ಸೇರಿ ನಾಲ್ವರು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ನಾಲ್ಕರ ನಿಪ್ಪಾಣಿಯ ಸ್ಥವನಿಧಿ ಘಾಟ್ ಬಳಿ ಅಪಘಾ ನಡೆದಿದೆ. ಲಾರಿ ಢಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರರ ಮೇಲೆ ಹಲ್ಲೆ ನಡೆಸಿದ ಎಂಇಎಸ್ ಪುಂಡರು
ಮೃತರೆಲ್ಲರೂ ಸಹ ನಿಪ್ಪಾಣಿ ನಗರದವರೆಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ನಿಪ್ಪಾಣಿ ಶಹರ ಪೊಲೀಸರ ಭೇಟಿ ನೀಡಿದ್ದು, ಕಾರಿನಲ್ಲಿದ್ದ ಶವ ಹೊರ ತೆಗೆಯಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ