ಅಂತರ್ರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಲೇಖಕಿ ಗೀತಾಂಜಲಿಶ್ರೀ ಅವರ ಕಾದಂಬರಿ ಆಯ್ಕೆ
ಲಂಡನ್: ಲೇಖಕಿ ಗೀತಾಂಜಲಿ ಶ್ರೀ ಅವರ ‘ಟೂಮ್ ಆಫ್ ಸ್ಯಾಂಡ್’ ಕಾದಂಬರಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ.
ಇದರೊಂದಿಗೆ ಹಿಂದಿ ಪುಸ್ತಕವೊಂದು ಬೂಕರ್ ಪ್ರಶಸ್ತಿಗೆ ಭಾಜನವಾಗಿದ್ದು, ಇದೇ ಮೊದಲು ಎಂಬ ಹೆಗ್ಗಳಿಕೆಗೆ ‘ಟೂಮ್ ಆಫ್ ಸ್ಯಾಂಡ್’ ಪಾತ್ರವಾಗಿದೆ.
ಗುರುವಾರ ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಗೀತಾಂಜಲಿ ಶ್ರೀ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಪ್ರಶಸ್ತಿಯೂ 50,000 ಸಾವಿರ ಪೌಂಡ್ (ಸುಮಾರು ₹50 ಲಕ್ಷ) ಮೌಲ್ಯದ ಬಹುಮಾನವನ್ನು ಒಳಗೊಂಡಿದ್ದು, ಡೈಸಿ ರಾಕ್‌ವೆಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
‘ನಾನು ಬೂಕರ್ ಪ್ರಶಸ್ತಿ ಬಗ್ಗೆ ಕನಸು ಕಂಡಿರಲಿಲ್ಲ. ಎಂದಿಗೂ ಯೋಚನೆಯನ್ನೂ ಮಾಡಿರಲಿಲ್ಲ. ಎಂತಹ ದೊಡ್ಡ ಮನ್ನಣೆ, ನಾನು ಆಶ್ಚರ್ಯಚಕಿತಳಾಗಿದ್ದೇನೆ. ಗೌರವ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದೆ’ ಎಂದು ಗೀತಾಂಜಲಿ ಸಂತಸ ವ್ಯಕ್ತಪಡಿಸಿದ್ದಾರೆ.





