March 26, 2026

ಕಲ್ಲಡ್ಕ: ಪ್ಲ್ಯಾಟ್ ನ ಮೂರನೇ ಮಹಡಿ ನಿಂದ ಬಿದ್ದು ಬಾಲಕ ಮೃತ್ಯು

0
IMG-20220527-WA0084.jpg

ಬಂಟ್ವಾಳ: ಗೆಳೆಯಯರ ಜೊತೆ ಆಟ ಆಡುತ್ತಿದ್ದ ವೇಳೆ 6 ನೇ ಕ್ಲಾಸಿನ ವಿದ್ಯಾರ್ಥಿ ಯೋರ್ವ ಆಯ ತಪ್ಪಿ ಮೂರನೇ ಮಹಡಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ಕಲ್ಲಡ್ಕ ದಲ್ಲಿ ಮೇ.26 ರಂದು ನಡೆದಿದೆ.

‌ಕಲ್ಲಡ್ಕ ನಿವಾಸಿ ಅಹಮ್ಮದ್ ಅವರ ಪುತ್ರ ಮಹಮ್ಮದ್ ಸಾಹಿಲ್ (10) ಮೃತಪಟ್ಟ ಬಾಲಕ.

ಕಲ್ಲಡ್ಕ ಸಮೀಪದ ಗೊಳ್ತಮಜಲು ಎಂಬಲ್ಲಿರುವ ಸಿಟಪ್ಲಾಜಾ ರೆಸಿಡೆನ್ಸಿ ಯ ಮೂರನೇ ಮಹಡಿಯಸೀಟ್ ಹೌಸ್ ನಲ್ಲಿ ಸಾಹಿಲ್ ಗೆಳೆಯರ ಜೊತೆ ಆಟ ಆಡುತ್ತಿದ್ದ.

ಅ ವೇಳೆ ಆಯ ತಪ್ಪಿ ಮೂರನೇ ಮಹಡಿಯ ಮೇಲಿನಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ವೇಳೆ ಮೃತಪಟ್ಟ ಘಟನೆ ನಡೆದಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!