ಬಂಗಾಳದ ನಟಿಯ ಮೃತದೇಹ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕೋಲ್ಕತ್ತಾ: ಬಂಗಾಳದ ಮನರಂಜನಾ ಉದ್ಯಮದಲ್ಲಿ ಮತ್ತೊಂದು ಆಘಾತಕಾರಿ ಸಾವು ಸಂಭವಿಸಿದೆ. ಟಿವಿ ನಟಿ ಪಲ್ಲವಿ ಡೇ ಅವರು ಕೋಲ್ಕತ್ತಾದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೆಲವು ದಿನಗಳ ನಂತರ, 21 ವರ್ಷದ ರೂಪದರ್ಶಿ-ನಟಿ ಬಿದಿಶಾ ಡಿ ಮಜುಂದಾರ್ ಅವರು ಬುಧವಾರ ಸಂಜೆ ಕೋಲ್ಕತ್ತಾದ ಡುಮ್‌ಡಮ್ ಪ್ರದೇಶದ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೇ 25 ರಂದು ನೆರೆಹೊರೆಯವರು ಬಾಗಿಲು ಒಡೆದು ಮನೆಗೆ ಪ್ರವೇಶಿಸಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಡೆಲ್ ಬಿದಿಶಾ ಕೋಲ್ಕತ್ತಾದ ಉತ್ತರದ ಉಪನಗರದವರು. ವಧುವಿನ ಮೇಕಪ್ ಫೋಟೋ ಶೂಟ್‌ಗಳಲ್ಲಿ ಜನಪ್ರಿಯ ಮುಖವಾಗಿದ್ದರು. ಬಿದಿಶಾ ಡಿ ಮಜುಂದಾರ್ ಅವರು 2021 ರಲ್ಲಿ ‘ಭಾರ್- ದಿ ಕ್ಲೌನ್’ ಎಂಬ ಕಿರುಚಿತ್ರದಲ್ಲಿ ಮೊದಲ ಬಾರಿ ನಟನೆಯಲ್ಲಿ ಕಾಣಿಸಿಕೊಂಡಿದ್ದರು.





