ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವು
ಬೆಂಗಳೂರು: ಈಜಲು ಹೋಗಿದ್ದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಗುಬ್ಬಿ ಕೆರೆಯಲ್ಲಿ ಗುರುವಾರ ನಡೆದಿದೆ.
ಸಾರಾಯಿಪಾಳ್ಯದ ಇಮ್ರಾನ್ ಪಾಷಾ (17), ಮುಬಾರಕ್(17) ಮತ್ತು ಶಾಹೀದ್ (16) ಮೃತ ಯುವಕರು. ಅಬ್ದುಲ್ ರೆಹಮಾನ್ ಮತ್ತು ಶಾಹೀಲ್ ಎಂಬವರು ರಕ್ಷಣೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಸ್ಥಗಿತಗೊಳಿಸಿದ್ದರು. ಶುಕ್ರವಾರ ಮುಂಜಾನೆಯೇ ಮೃತದೇಹಗಳಿಗೆ ಶೋಧ ಕಾರ್ಯ ಮಂದುವರಿಸಿದ್ದಾರೆ





