March 26, 2026

ಅಜ್ಮೀರ್ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾ ಹಿಂದೆ ಹಿಂದೂ ದೇಗುಲವಾಗಿತ್ತು: ಸಮೀಕ್ಷೆಗೆ ಸಂಘಪರಿವಾರ ಆಗ್ರಹ

0
image_editor_output_image1326453956-1653630332268.jpg

ಅಜ್ಮೀರ್: ರಾಜಸ್ಥಾನದ ಅಜ್ಮೇರ್‌ನಲ್ಲಿರುವ, ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾ ಹಿಂದೆ ಹಿಂದು ದೇಗುಲವಾಗಿತ್ತು ಎಂದು ‘ಮಹಾರಾಣ ಪ್ರತಾಪ್ ಸೇನಾ’ ಹಾಗೂ ಸಂಘಪರಿವಾರ ಪ್ರತಿಪಾದಿಸಿದ್ದು, ಭಾರತೀಯ ಪುರಾತತ್ವ ಇಲಾಖೆಯಿಂದ (ಎಎಸ್ಐ) ಸಮೀಕ್ಷೆ ನಡೆಯಲಿ ಎಂದು ಆಗ್ರಹಿಸಿದೆ.

ದರ್ಗಾದ ಕಿಟಕಿಗಳಲ್ಲಿ ಹಿಂದು ಚಿಹ್ನೆಗಳಿವೆ ಎಂದು ‘ಮಹಾರಾಣ ಪ್ರತಾಪ್ ಸೇನಾ’ದ ರಾಜವರ್ಧನ್ ಸಿಂಗ್ ಪರ್ಮಾರ್ ಹೇಳಿದ್ದಾರೆ.

ಆದರೆ, ಈ ಪ್ರತಿಪಾದನೆಯನ್ನು ದರ್ಗಾ ಆಡಳಿತ ಅಲ್ಲಗಳೆದಿದ್ದು, ಯಾವುದೇ ಕುರುಹು ಇಲ್ಲ ಎಂದು ಹೇಳಿದೆ.

ವರದಿಗಾರರನ್ನು ಉದ್ದೇಶಿಸಿ ಮಾತನಾಡಿದ ಪರ್ಮಾರ್, ‘ದರ್ಗಾವು ಪ್ರಾಚೀನ ಹಿಂದು ದೇಗುಲವಾಗಿತ್ತು. ದರ್ಗಾದ ಗೋಡೆಗಳಲ್ಲಿ ಮತ್ತು ಕಿಟಕಿಗಳಲ್ಲಿ ಸ್ವಸ್ತಿಕ ಚಿಹ್ನೆ ಇದೆ. ಭಾರತೀಯ ಪುರಾತತ್ವ ಇಲಾಖೆ ದರ್ಗಾದಲ್ಲಿ ಸಮೀಕ್ಷೆ ನಡೆಸಬೇಕೆಂದು ಆಗ್ರಹಿಸುತ್ತೇವೆ’ ಎಂದು ಹೇಳಿದ್ದಾರೆ.

ಈ ಕುರಿತು ‘ಅಂಜುಮಾನ್ ಸಯ್ಯದ್ ಜದ್‌ಗಾನ್’ ಅಧ್ಯಕ್ಷ ಮೊಯಿನ್ ಚಿಸ್ತಿ ಪ್ರತಿಕ್ರಿಯಿಸಿ, ‘ಹಿಂದು ದೇಗುಲವಾಗಿತ್ತೆಂಬ ಪ್ರತಿಪಾದನೆ ಆಧಾರರಹಿತ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!