February 1, 2026

ಮಧ್ಯಪ್ರದೇಶ ಸಚಿವ ಇಂದರ್ ಸಿಂಗ್ ಸೊಸೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

0
Screenshot_2022-05-11-11-04-00-70_680d03679600f7af0b4c700c6b270fe7.jpg

ಭೋಪಾಲ್: ಮಧ್ಯಪ್ರದೇಶ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರ ಸೊಸೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶಾಜಾಪುರದ ಅವರ ನಿವಾಸದಲ್ಲಿ ನಡೆದಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಮೃತ ಮಹಿಳೆಯನ್ನು ಇಂದರ್ ಸಿಂಗ್ ಪರ್ನಾರ್ ಅವರ ಪುತ್ರ ದೇವರಾಜ್ ಸಿಂಗ್ ಅವರ ಪತ್ನಿ ಸವಿತಾ ಪರ್ಮಾರ್ (22) ಎಂದು ಗುರುತಿಸಲಾಗಿದೆ. ತಮ್ಮ ನಿವಾಸದಲ್ಲಿ ಮಂಗಳವಾರ ಸಂಜೆ 5.30ರ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸವಿತಾ(22) ಕಳೆದ ಮೂರು ವರ್ಷಗಳ ಹಿಂದಷ್ಟೇ ಇವರ ಮದುವೆ ನೆರವೇರಿತ್ತು.

ಕೌಟುಂಬಿಕ ಸಮಸ್ಯೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ. ಸಚಿವರು ಘಟನಾ ಸಮಯದಲ್ಲಿ ಭೋಪಾಲ್‌ನಲ್ಲಿದ್ದರೆ, ಸವಿತಾ ಪತಿ ದೇವರಾಜ್ ಸಿಂಗ್ ಪಕ್ಕದ ಹಳ್ಳಿಗೆ ಮದುವೆ ಸಮಾರಂಭಕ್ಕೆ ಹೋಗಿದ್ದರು. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಚಿವರು ಮತ್ತು ಆಕೆಯ ಪತಿ ಮನೆಗೆ ಹಾಜರಾದರು. ಸಚಿವರ ನಿವಾಸದ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!