July 6, 2026

ಅತ್ಯಾಚಾರ ಉದ್ದೇಶಪೂರ್ವಕವಲ್ಲ, ಅದು ಅನಿರೀಕ್ಷಿತ: ವಿವಾದಕ್ಕೆ ಕಾರಣವಾದ ಗೃಹ ಸಚಿವೆಯ ಹೇಳಿಕೆ

0
Screenshot_2022-05-06-10-39-32-06_680d03679600f7af0b4c700c6b270fe7.jpg

ಅಮರಾವತಿ: ಅತ್ಯಾಚಾರ ಉದ್ದೇಶಪೂರ್ವಕವಾಗಿ ನಡೆಯುವುದಿಲ್ಲ. ಅದು ಅನಿರೀಕ್ಷಿತವಾಗಿದೆ ಎಂಬುದಾಗಿ ಆಂಧ್ರ ಗೃಹ ಸಚಿವೆ ಹೇಳಿರುವುದು ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಸಚಿವೆಯ ಹೇಳಿಕೆಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಆಂಧ್ರಪ್ರದೇಶದ ರೇಪಲ್ಲೆ ರೈಲು ನಿಲ್ದಾಣದಲ್ಲಿ ಮೇ 1ರಂದು 25 ವರ್ಷದ ಗರ್ಭಿಣಿಯೊಬ್ಬರ ಮೇಲೆ ದುಷ್ಕರ್ಮಿಗಳು ಎಸಗಿದ ಸಾಮೂಹಿಕ ಅತ್ಯಾಚಾರ ವಿಚಾರವಾಗಿ ಮಾತನಾಡಿದ ಆಂಧ್ರಪ್ರದೇಶದ ಗೃಹ ಸಚಿವೆ ತಾನೆತಿ ವನಿತಾ ಅವರು, ಉದ್ದೇಶಪೂರ್ವಕವಾಗಿ ಅತ್ಯಾಚಾರ ನಡೆದಿಲ್ಲ. ಅದೊಂದು ಅನಿರೀಕ್ಷಿತ ಕೃತ್ಯವಾಗಿದೆ. ಮಾನಸಿಕ ಪರಿಸ್ಥಿತಿ ಮತ್ತು ಬಡತನದಿಂದಾಗಿ ಅತ್ಯಾಚಾರ ಎಸಗುತ್ತಾರೆಯೇ ಹೊರತು ಅವರು ನಿಜವಾಗಿ ಅತ್ಯಾಚಾರ ಮಾಡುವ ಉದ್ದೇಶ ಹೊಂದಿರುವುದಿಲ್ಲ ಎಂದಿದ್ದರು.

ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಅಗತ್ಯವಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ಸಚಿವೆ ವನಿತಾ ಹೇಳಿಕೆ ಸದ್ಯ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಪಕ್ಷ ತೆಲುಗು ದೇಶಂ ಪಕ್ಷವು ವನಿತಾ ಹೇಳಿಕೆಯನ್ನು ಖಂಡಿಸಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿಯ ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡಬಾರದು ಎಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!