April 3, 2025

ಕೊಲೆ ಆರೋಪಿಗೆ ಕೇವಲ 70 ದಿನಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ ಕೋರ್ಟ್

0

ಸೂರತ್‌: ಕೊಲೆ ಆರೋಪಿಯೊಬ್ಬನಿಗೆ ಘಟನೆ ನಡೆದ ಕೇವಲ 70 ದಿನಗಳಲ್ಲಿ ಸೂರತ್‌ನ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿರುವ ಅಪರೂಪದ ವಿದ್ಯಾಮಾನ ನಡೆದಿದೆ.

ಕಳೆದ ಫೆಬ್ರವರಿಯಲ್ಲಿ ಕಾಲೇಜು ವಿದ್ಯಾರ್ಥಿನಿ 21 ವರ್ಷದ ಗ್ರೀಷ್ಮಾ ವೆಕಾರಿಯಾಳನ್ನು ಫೆನಿಲ್‌ ಗೊಯಾನಿ ಎಂಬಾತ ಕುಟುಂಬ ಸದಸ್ಯರೆದುರೇ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದ. ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಿರುವ ನ್ಯಾಯಾಲಯ ಘಟನೆ ನಡೆದು70 ದಿನಗಳಲ್ಲಿ ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಸೂರತ್‌ನ ಪ್ರಿನ್ಸಿಪಲ್‌ ಸೆಷನ್ಸ್‌ ಮತ್ತು ಜಿಲ್ಲಾ ನ್ಯಾಯಾಧೀಶ ಕೆ.ಕೆ.ವ್ಯಾಸ್‌ ಅವರು ತೀರ್ಪು ನೀಡುವುದಕ್ಕೂ ಮುನ್ನ ದೆಹಲಿಯ ನಿರ್ಭಯಾ ಪ್ರಕರಣವನ್ನು ಉಲ್ಲೇಖ ಮಾಡಿದ್ದಾರೆ.

 

 

ಮಹಿಳೆಯರ ಮೇಲೆ ಇಂತಹ ಹೀನ ಕೃತ್ಯಗಳನ್ನು ತಡೆಯಬೇಕಾದರೆ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸುವುದು ಅಗತ್ಯ ಎಂದವರು ಅಭಿಪ್ರಾಯಪಟ್ಟರು. ಒಂದೇ ವಾರದಲ್ಲಿ ಪೊಲೀಸರು 2,500 ಪುಟಗಳ ಆರೋಪಪಟ್ಟಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಲ್ಲದೆ, 25 ಪ್ರತ್ಯಕ್ಷ ಸಾಕ್ಷ್ಯಗಳು, 120 ದಾಖಲೆಗಳನ್ನು ಕೂಡಾ ಒದಗಿಸಿದ್ದರು.

Leave a Reply

Your email address will not be published. Required fields are marked *

error: Content is protected !!