ಕರಾಚಿ ಯೂನಿರ್ವಸಿಟಿ ಆವರಣದೊಳಗಿದ್ದ ವ್ಯಾನ್ ಸ್ಫೋಟ: ನಾಲ್ವರು ಮೃತ್ಯು
ಕರಾಚಿ: ಪಾಕಿಸ್ತಾನದ ಕರಾಚಿ ಯೂನಿರ್ವಸಿಟಿ ಆವರಣದೊಳಗಿದ್ದ ವ್ಯಾನ್ ಸ್ಫೋಟಗೊಂಡ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ಕರಾಚಿ ಯೂನಿರ್ವಸಿಟಿಯ ಕನ್ಫೂಶಿಯಸ್ ಇನ್ಸ್ ಟಿಟ್ಯೂಟ್ ಸಮೀಪದಲ್ಲಿದ್ದ ವ್ಯಾನ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಜಿಯೋ ಟಿವಿ ವರದಿ ತಿಳಿಸಿದೆ.
ಸ್ಫೋಟದ ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ರಕ್ಷಣಾ ಮತ್ತು ಭದ್ರತಾ ಪಡೆಗಳು ದೌಡಾಯಿಸಿದ್ದು, ಸ್ಥಳವನ್ನು ಸುತ್ತುವರೆದು ಪರಿಶೀಲನೆ ನಡೆಸುತ್ತಿರುವುದಾಗಿ ವರದಿ ಹೇಳಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ವಿವರಿಸಿದೆ.




