March 21, 2026

ಮಂಗಳೂರು: ಎರಡು ಕಾರುಗಳ ಮೇಲೆ ಬಿದ್ದ ಬೃಹತ್‌ ಗಾತ್ರದ ಕಟೌಟ್‌

0
Screenshot_20220426-174221_Chrome.jpg

ಮಂಗಳೂರು: ನಗರದ ಟೌನ್‌ ಬಳಿ ಅಳವಡಿಸಿದ್ದ ಬೃಹತ್‌ ಗಾತ್ರದ ಕಟೌಟ್‌ ಗಾಳಿಗೆ ಹಾರಿ ಎರಡು ಕಾರುಗಳ ಮೇಲೆ ಬಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ತೆರವೊಳಿಸಿದ್ದಾರೆ.

ಏ.27ರಿಂದ ಏ.30ರವರೆಗೆ ಮಂಗಳೂರು ಟೌನ್‌ ಹಾಲ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್‌ ಸ್ಪರ್ಧೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಲಾಕ್ ಟವರ್‌ ಬಳಿ ಅಳವಡಿಸಿದ್ದ 40×20 ಬೃಹತ್‌ ಗಾತ್ರದ ಕಟೌಟ್‌ ಅಳವಡಿಸಿದ ಅರ್ಧ ಗಂಟೆಯಲ್ಲೆ ಗಾಳಿಗೆ ಹಾರಿ ರಸ್ತೆ ಬದಿಯಲ್ಲಿ ಪಾರ್ಕ್‌ ಮಾಡಿದ್ದ ಎರಡು ಕಾರುಗಳ ಮೇಲೆ ಬಿದ್ದಿದೆ.

ಅದೃಷ್ಟವಶಾತ್‌ ಪಾರ್ಕ್‌ ಮಾಡಿದ ಕಾರಿನಲ್ಲಿ ಯಾರೂ ಇರಲಿಲ್ಲ. ಈ ವೇಳೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ಸಿಬ್ಬಂದಿ ಕಟೌಟ್‌ ಅಡಿ ಇದ್ದ ವಾಹನ ತೆರವುಗೊಳಿಸಿದ್ದಾರೆ. ಕಟೌಟ್‌ ಬಿದ್ದ ಪರಿಣಾಮ ಕೆಲಕಾಲ ಕ್ಲಾಕ್‌ ಟವರ್‌ ಬಳಿ ಸಂಚಾರ ಅಸ್ತವ್ಯಸ್ತಗೊಂಡಿತು.

Leave a Reply

Your email address will not be published. Required fields are marked *

error: Content is protected !!