ಮೀಂಜ ಪಂಚಾಯತ್ ಬಜೆಟ್ ಮಂಡನೆ: ಸಮಗ್ರ ಅಭಿವೃದ್ಧಿಗೆ ಆದ್ಯತೆ
ಮಂಜೇಶ್ವರ: ಮೀಂಜ ಪಂಚಾಯತ್ 2022-23 ವಷ೯ಕ್ಕಿರುವ ಬಜೆಟ್ ಮಂಡನೆಯನ್ನು ಮೀಂಜ ಪಂ ಉಪಾಧ್ಯಕ್ಷರಾದ ಜಯರಾಮ ಬಲ್ಲಂಗುಡೆಲ್ ಮಂಡಿಸಿದರು.
ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಲೈಫ್ ಭವನ ಪದ್ಧತಿಯ ಒಳಪಟ್ಟ ಎಲ್ಲಾರಿಗೂ ಮನೆ ನೀಡಲೂ ಕೂಡಾ ಆಧ್ಯತೆ ನೀಡಲಾಗಿದೆ. ಇದಲ್ಲದೇ ಆರೋಗ್ಯ, ಸಾರಿಗೆ ಸೇವಾವಲಯಕ್ಕೂ ಒತ್ತು ನೀಡಲಾಗಿದೆ. ಬಡವರ ಹಾಗೂ ವೃದ್ಧರ ಏಳಿಗೆಗೆ ಇರುವ ಕ್ಷೇಮಕಾಯ೯ಗಳಿಗೂ ಬಜೆಟ್ ನಲ್ಲಿ ಮೀಸಲಿರಿಸಲಾಗಿದೆ.ಬಜೆಟ್ ಸಮ್ಮೇಳನದ ಅಧ್ಯಕ್ಷತೆಯನ್ನು ಮೀಂಜ ಪಂ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ವಹಿಸಿದ್ದರು. ಮೀಂಜ ಪಂಚಾಯತ್ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ





