July 5, 2026

ಸಿನೆಮಾ ಚೆನ್ನಾಗಿಲ್ಲವೆಂದು ಅಭಿಮಾನಿ‌ ಆತ್ಮಹತ್ಯೆ

0
image_editor_output_image-780008381-1647411214074.jpg

ಹೈದರಾಬಾದ್: ಮಾರ್ಚ್ 11 ರಂದು ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ಚಿತ್ರ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಯಾಗಿದ್ದು, ಈ ಚಿತ್ರದ ಬಗ್ಗೆ ನೆಗೆಟಿವ್ ವಿಮರ್ಶೆಗಳನ್ನು ಬಂದಾಗ ಪ್ರಭಾಸ್ ಅವರ ರವಿತೇಜ ಎಂಬ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ತಿಲಕ್ ನಗರದಲ್ಲಿ ನಡೆದಿದೆ.

ರಾಧೆ ಶ್ಯಾಮ್ ನೆಗೆಟಿವ್ ವಿಮರ್ಶೆಗಳನ್ನು ಪಡೆದಾಗ ರವಿ ಅಸಮಾಧಾನಗೊಂಡಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಭಾಸ್ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ತಿಳಿದು ಬಂದಿದೆ.

ರಾಧೆ ಶ್ಯಾಮ್ ಸಿನಿಮಾ ರವಿತೇಜ ಅವರ ನಿರೀಕ್ಷೆಗೆ ತಕ್ಕಂತೆ ಮೂಡಿಬರಲಿಲ್ಲ ಎಂಬ ಭಾವನೆಯಿಂದ ಸಾಯುತ್ತೇನೆ ಎಂದು ತಾಯಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಈ ಸಂಬಂಧ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಇದೀಗ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!