February 4, 2026

ಬಜ್ಪೆ: ಊಟ ಮಾಡಿ ಮಲಗಿದ್ದ ಮಹಿಳೆ ನಾಪತ್ತೆ

0
Screenshot_2022-03-16-11-25-19-36_680d03679600f7af0b4c700c6b270fe7.jpg

ಮಂಗಳೂರು: ಊಟ ಮಾಡಿ ಮಲಗಿದ್ದ ಮಹಿಳೆಯೊಬ್ಬರು ರಾತ್ರಿ ಏಕಾಏಕಿ ನಾಪತ್ತೆಯಾದ ಘಟನೆ ನಗರದ ಬಜಪೆಯಲ್ಲಿ ನಡೆದಿದೆ.

ಈ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಮಹಿಳೆಯನ್ನು ಮುಮ್ತಾಝ್ (43) ಎಂದು ಗುರುತಿಸಲಾಗಿದೆ.

ಮಂಗಳೂರು ಹೊರವಲಯದ ಬಜಪೆಯ ಡೈಮಂಡ್ ಹೋಂನ ತನ್ನ ಮನೆಯಲ್ಲಿದ್ದ ಮುಮ್ತಾಝ್‌ ಮಾ.14ರಂದು ರಾತ್ರಿ 10.00 ಗಂಟೆಗೆ ಊಟ ಮಾಡಿ ಮಲಗಿದ್ದವರು ಮರುದಿನ ಮಾ.15 ರಂದು ಬೆಳಗ್ಗೆ 7.00 ಗಂಟೆಗೆ ನಾಪತ್ತೆಯಾಗಿದ್ದರು.

ಇವರ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಕೂಡಾ ಮುಮ್ತಾಝ್ ಇವರು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!