July 5, 2026

ಇಂದಿನಿಂದ 12-14 ವರ್ಷದ ಮಕ್ಕಳಿಗೆ ಲಸಿಕೆ, ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

0
Screenshot_2022-03-16-11-19-54-17_680d03679600f7af0b4c700c6b270fe7.jpg

ನವದೆಹಲಿ: 12-14 ವರ್ಷ ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಎಲ್ಲ ರಾಜ್ಯಗಳಿಗೆ ಕಳುಹಿಸಿಕೊಟ್ಟಿದೆ.

12ರಿಂದ 13 ವರ್ಷ ಹಾಗೂ 13ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಕೊರ್ಬೆವ್ಯಾಕ್ಸ್ ಲಸಿಕೆಯನ್ನು ಮಾತ್ರ ನೀಡಲಾಗುತ್ತದೆ. ಈ ಲಸಿಕೆಯನ್ನು ಎರಡು ಡೋಸ್‌ಗಳನ್ನು ನೀಡಲು ಉದ್ದೇಶಿಸಿದ್ದು, ಇವುಗಳ ನಡುವೆ 28 ದಿನಗಳ ಅಂತರವಿರಬೇಕು ಎಂದು ಮಾರ್ಗಸೂಚಿ ತಿಳಿಸಿದೆ.

2010 ಹಾಗೂ ಅದಕ್ಕೂ ಮುನ್ನ ಜನಿಸಿರುವವರು ಅಂದರೆ, 12 ವರ್ಷ ಪೂರ್ಣಗೊಂಡ ಮಕ್ಕಳು ‘ಕೋವಿನ್’ನಲ್ಲಿ ನೋಂದಣಿ ಮಾಡಿಕೊಳ್ಳಲು ಅರ್ಹರಾಗಿದ್ದಾರೆ. ನೋಂದಣಿ ಆಧಾರದಲ್ಲಿ ಲಸಿಕೆ ನೀಡುವ ದಿನಾಂಕ ಹಾಗೂ ಸಮಯ ನಿಗದಿಯಾಗುತ್ತದೆ. ಲಸಿಕೆ ಪಡೆಯುವ ದಿನಾಂಕಕ್ಕೆ ಸರಿಯಾಗಿ 12 ವರ್ಷ ತುಂಬಿರುವುದು ಕಡ್ಡಾಯ. ಒಂದು ವೇಳೆ ಕೋವಿನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರೂ, ಮಗುವಿಗೆ 12 ವರ್ಷ ತುಂಬದಿದ್ದ ಪಕ್ಷದಲ್ಲಿ, ಲಸಿಕೆ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ನೋಂದಣಿಗೆ ಹಲವು ವಿಧಾನಗಳನ್ನು ಸೂಚಿಸಲಾಗಿದೆ. ಕೋವಿನ್‌ನಲ್ಲಿ ಹೊಸ ಖಾತೆ ತೆರೆದು ನೋಂದಣಿ ಮಾಡಿಕೊಳ್ಳಬಹುದು. ಕುಟುಂಬ ಸದಸ್ಯರು ಈಗಾಗಲೇ ಕೋವಿನ್ ಖಾತೆ ಹೊಂದಿದ್ದರೆ, ಅದರ ಮೂಲಕವೂ ನೋಂದಣಿ ಮಾಡಿಕೊಳ್ಳಬದು. ಅಥವಾ ಲಸಿಕಾ ಕೇಂದ್ರದಲ್ಲೇ ನೋಂದಣಿ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *

You may have missed

error: Content is protected !!