February 4, 2026

ಬಣವಿಕಲ್ಲು ಸಮೀಪ ಟ್ರ್ಯಾಕ್ಸ್ ಪಲ್ಟಿ: ಐವರು ಮೃತ್ಯು, 9 ಜನರಿಗೆ ಗಾಯ

0
image_editor_output_image1347452802-1647408750995.jpg

ವಿಜಯನಗರ: ಸಮೀಪದ ಬಣವಿಕಲ್ಲು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಮಂಗಳವಾರ ತಡರಾತ್ರಿ ಎರಡು ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಸ್ ಪಲ್ಟಿಯಾಗಿದ್ದರಿಂದ ಐವರು ಮೃತಪಟ್ಟಿದ್ದು, ಒಂಬತ್ತು ಜನರಿಗೆ ಗಾಯಗಳಾಗಿವೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ವಂದಾಲ ಗ್ರಾಮದ ಸಿದ್ದಯ್ಯ ಕಾಳಗಿ (42), ನಿಡಗುಂದಿಯ ಕಲ್ಲವ್ವ(60), ಕಿರಾಳ್ ಗ್ರಾಮದ ಕುಂತ್ತವ್ವ (50), ಆಲಮಟ್ಟಿಯ ನೀಲಮ್ಮ(54), ನಿಡಗುಂದಿಯ ಲಕ್ಷ್ಮಿ ಬಾಯಿ (60) ಮೃತರು.

ನಿಡಗುಂದಿಯಿಂದ ತಮಿಳುನಾಡಿನ ರಾಮೇಶ್ವರಂಗೆ ಹೊರಡುವಾಗ ಈ ಘಟನೆ ಸಮಭವಿಸಿದೆ. ಅಪಘಾತದ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಮೂವರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಒಂಬತ್ತು ಜನರನ್ನು ಕೂಡ್ಲಿಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ. ಕಾನಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!