ಜನಪರ ಬಜೆಟ್ ಮಂಡನೆ ಮಾಡಲು ಆರೆಸ್ಸೆಸ್ ಅವಕಾಶ ಕೊಡುತ್ತಿಲ್ಲ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಆರ್ಥಿಕ ಸಚಿವರಾಗಿ ಮೊದಲ ಬಜೆಟ್ ನ್ನ ಬೊಮ್ಮಯಿರವರು ಮಂಡನೆ ಮಾಡುತ್ತಿದ್ದಾರೆ, ಸುದೀರ್ಘ ಆಡಳಿತ ಅನುಭವ ಹೊಂದಿದ್ದಾರೆ. ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ, ನಿರೀಕ್ಷೆಯನ್ನ ಈಡೇರಿಸಲು ಸಿಎಂ ಹಿಂದೆ ಇರುವವರು ಪರ್ಮಿಷನ್ ಕೊಡ್ಬೇಕು ಅಲ್ವಾ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದ ಬಳಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಇಂದು ರಾಜ್ಯ ಬಜೆಟ್ ಮಂಡನೆ ಇದ್ದೂ ಸಿಎಂ ಮೇಲೆ ರಾಜ್ಯದ ಜನತೆ ಭಾರಿ ನಿರೀಕ್ಷೆಯನ್ನಿಟ್ಟಿದ್ದಾರೆ ಆದರೆ ಪರೋಕ್ಷವಾಗಿ ಜನಪರ ಬಜೆಟ್ ಮಂಡನೆ ಮಾಡಲು ಆರ್ ಎಸ್ ಎಸ್ ನಾಯಕರು ಅವಕಾಶ ಕೊಡ್ಬೇಕು ಅಲ್ವಾ ಎಂದು ಹೇಳಿದ್ದಾರೆ.




