July 6, 2026

ಅಪಾಯಕಾರಿ ಗಾಂಜಾ ಚಾಕಲೇಟ್‍ಗಳ ಮಾರಾಟ: ಓಡಿಶಾ ಮೂಲದ ಇಬ್ಬರ ಬಂಧನ

0
image_editor_output_image-590049540-1646384382475.jpg

ಮಹದೇವಪುರ: ಬಹಳ ಅಪಾಯಕಾರಿ ಗಾಂಜಾ ಚಾಕಲೇಟ್‍ಗಳನ್ನು ಮಾರಾಟ ಮಾಡುತ್ತಿದ್ದ ಓಡಿಶಾ ಮೂಲದ ಇಬ್ಬರು ಯುವಕರನ್ನು ಬಂಧಿಸುವಲ್ಲಿ ಮಹದೇವಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಓಡಿಶಾ ಮೂಲದ ಪ್ರದೀಪ್ ಕುಮಾರ್ (33) ಹಾಗೂ  ಎಸ್.ಕೆ. ಸಜಾನ್ (27) ಬಂಧಿತ ಆರೋಪಿಗಳು.

ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿಗಳು ಗಾಂಜಾ ಮತ್ತು ಗಾಂಜಾ ಚಾಕಲೇಟ್‍ಗಳನ್ನು ಓಡಿಶಾ ರಾಜ್ಯದಿಂದ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 1 ಕೆ.ಜಿ ಗಾಂಜಾ ಮತ್ತು 18 ಕೆ.ಜಿ ತೂಕದ 3200 ಗಾಂಜಾ ಚಾಕ್ಲೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!