February 2, 2026

37 ಎಸೆತಗಳಲ್ಲಿ ಶತಕ ಸಿಡಿಸಿದ ವೆಸ್ಟ್ ಇಂಡೀಸ್ ಆಟಗಾರ

0
Screenshot_2022-03-03-10-46-44-63_680d03679600f7af0b4c700c6b270fe7.jpg

ವೆಸ್ಟ್ ಇಂಡೀಸ್: ಟೀಮ್ ಇಂಡಿಯಾ ವಿರುದ್ದದ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ನಿಕೋಲಸ್ ಪೂರನ್ ಇದೀಗ ಟಿ10 ಬ್ಲಾಸ್ಟರ್ ನಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.

ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಟ್ರಿನಿಡಾಡ್ T10 ಬ್ಲಾಸ್ಟ್‌ನಲ್ಲಿ ಪೂರನ್ ಲೆದರ್‌ಬ್ಯಾಕ್ ಜೈಂಟ್ಸ್‌ ಪರ ಆಡುತ್ತಿದ್ದಾರೆ. ಸ್ಕಾರ್ಲೆಟ್ ಐಬಿಸ್ ಸ್ಕಾರ್ಚರ್ಸ್ ತಂಡದ ವಿರುದ್ದ ಪಂದ್ಯದಲ್ಲಿ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾರ್ಚರ್ಸ್ ತಂಡವು 10 ಓವರ್‌ಗಳಲ್ಲಿ ಗೆಲ್ಲಲು 129 ರನ್‌ಗಳನ್ನು ಕಲೆಹಾಕಿತು. 60 ಎಸೆತಗಳಲ್ಲಿ 130 ರನ್ ಗಳ ಗುರಿ ಪಡೆದ ಲೆದರ್ಬ್ಯಾಕ್ ತಂಡದ ಪರ ನಿಕೋಲಸ್ ಪೂರನ್ ಅಬ್ಬರಿಸಿದರು. 6 ಫೋರ್ ಹಾಗೂ 10 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಪೂರನ್ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ 8.3 ಓವರ್‌ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಪೂರನ್ ತಮ್ಮ ಫಾರ್ಮ್ ಅನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

Leave a Reply

Your email address will not be published. Required fields are marked *

error: Content is protected !!