February 2, 2026

ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: 10 ಆರೋಪಿಗಳ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಿದ ಪೊಲೀಸರು

0
Screenshot_2022-03-03-10-41-29-59_680d03679600f7af0b4c700c6b270fe7.jpg

ಬೆಂಗಳೂರು : ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆಯ ಎಲ್ಲ 10 ಆರೋಪಿಗಳ ವಿರುದ್ಧ ಅಕ್ರಮ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ ) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಸೀಗೆಹಟ್ಟಿ ಭಾರತಿ ಕಾಲೊನಿ ಬಳಿ ಫೆ .20 ರ ರಾತ್ರಿ ಹರ್ಷ ಹತ್ಯೆಯಾಗಿದ್ದು, ನಂತರ ಅವರ ತಾಯಿ ನೀಡಿದ ದೂರಿನ ಅನ್ವಯ 10 ಆರೋಪಿಗಳ ವಿರುದ್ಧ ಸಂಚು ರೂಪಿಸಿ , ಕೊಲೆ ಮಾಡಿರುವ ಪ್ರಕರಣ ದಾಖಲಿಸಲಾಗಿತ್ತು . ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು . 11 ದಿನಗಳು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು .

“ಹೆಚ್ಚಿನ ತನಿಖೆಗೆ ರಾಷ್ಟ್ರೀಯ ತನಿಖಾ ದಳ ಸೇರಿದಂತೆ ಇತರೆ ಉನ್ನತ ಸಂಸ್ಥೆಗಳಿಗೆ ವಹಿಸಿಕೊಡಲು ಅನುಕೂಲವಾಗುವಂತೆ ಹೊಸದಾಗಿ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.

Leave a Reply

Your email address will not be published. Required fields are marked *

error: Content is protected !!