August 21, 2026

ಸುಳ್ಯ: ರೆಂಜಾಳದಲ್ಲಿ ಯುವಕ ಆತ್ಮಹತ್ಯೆ

0
IMG-20220302-WA0015.jpg

ಸುಳ್ಯ: ತಾಲೂಕು ಮರ್ಕಂಜ ಗ್ರಾಮದ ರೆಂಜಾಳದಲ್ಲಿ ಯುವಕನೋರ್ವ ರಬ್ಬರ್‌ ಆ್ಯಸಿಡ್ ಸೇವೆಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ರೆಂಜಾಳ ನಿವಾಸಿ ದಿ.ಬೆಳ್ಯಪ್ಪ ಗೌಡ ಎಂಬವರ ಪುತ್ರ ಜಗದೀಶ್(28) ರವರು ಆತ್ಮಹತ್ಯೆ ಮಾಡಿಕೊಂಡ ಯುವಕ.

ನಿನ್ನೆ ಮನೆಯಲ್ಲಿ ರಬ್ಬರ್ ಗೆ ಬಳಸುವ ಆ್ಯಸಿಡ್ ಕುಡಿದು ಅಸ್ವಸ್ಥನಾದ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆ ಕೊಂಡೊಯ್ದು ಅಲ್ಲಿಂದ ಕೆ.ವಿ‌.ಜಿ‌.ಆಸ್ಪತ್ರೆ ಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಗೆ ಸ್ಪಂದಿಸದೆ ಮೃತರಾದರೆಂದು ತಿಳಿದುಬಂದಿದೆ. ಮೃತರು ಓರ್ವ ಸಹೋದರನನ್ನು ಅಗಲಿದ್ದಾರೆ. ಆತ್ಮಹತ್ಯೆ ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!