July 6, 2026

ರಷ್ಯಾದೊಂದಿಗಿನ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸಿದ ಆ್ಯಪಲ್, ಎಕ್ಸಾನ್ ಮೊಬೈಲ್, ಬೋಯಿಂಗ್ ಸಂಸ್ಥೆಗಳು

0
Screenshot_2022-03-02-11-50-51-58_ae93b0d4e668ae3b9e42de29105ee7f0.jpg

ನ್ಯೂಯಾರ್ಕ್: ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆಯನ್ನು ಖಂಡಿಸಿ ಅಮೆರಿಕ ಹಾಗೂ ನ್ಯಾಟೊ ಮಿತ್ರ ರಾಷ್ಟ್ರಗಳು ಹಲವು ನಿರ್ಬಂಧಗಳನ್ನು ಹೇರಿವೆ.

ಇದಕ್ಕೆ ಅಮೆರಿಕದ ಕಾರ್ಪೋರೇಟ್ ದೈತ್ಯ ಕಂಪನಿಗಳು ಕೈಜೋಡಿಸಿಕೊಂಡಿವೆ. ರಷ್ಯಾದೊಂದಿಗಿನ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸುವುದಾಗಿ ಟೆಕ್ ದೈತ್ಯ ಆ್ಯಪಲ್, ಎಕ್ಸಾನ್ ಮೊಬೈಲ್ ಹಾಗೂ ಬೋಯಿಂಗ್ ಸಂಸ್ಥೆಗಳು ಘೋಷಿಸಿವೆ.

ರಷ್ಯಾ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಿ ಎಲ್ಲ ವಿಭಾಗದಿಂದಲೂ ಪ್ರತ್ಯೇಕಿಸುವ ಗುರಿ ಹೊಂದಲಾಗಿದೆ. ಡಿಸ್ನಿ, ಫೋರ್ಡ್, ಜನರಲ್ ಮೋಟರ್ಸ್, ಮಾಸ್ಟರ್‌ಕಾರ್ಡ್, ಅಮೆರಿಕನ್ ಎಕ್ಸ್‌ಪ್ರೆಸ್ ಸಂಸ್ಥೆಗಳು ಈಗಾಗಲೇ ನಿರ್ಬಂಧವನ್ನು ಹೇರಿವೆ.

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸಿರುವ ಅಮೆರಿಕದ ಬಹುರಾಷ್ಟ್ರೀಯ ತೈಲ ಹಾಗೂ ಅನಿಲ ಕಂಪನಿಯಾಗಿರುವ ಎಕ್ಸಾನ್ ಮೊಬೈಲ್ ಕಾರ್ಪೋರೇಷನ್, ಹಂತ ಹಂತವಾಗಿ ರಷ್ಯಾದಿಂದ ಹಿಂದಕ್ಕೆ ಸರಿಯುವುದಾಗಿ ಘೋಷಿಸಿದೆ. ಎಕ್ಸಾನ್ ಮೊಬೈಲ್ 1995ರಿಂದಲೇ ರಷ್ಯಾದಲ್ಲಿ ಕಾರ್ಯಾಚರಿಸುತ್ತಿತ್ತು.

Leave a Reply

Your email address will not be published. Required fields are marked *

You may have missed

error: Content is protected !!