July 5, 2026

ಬೆಳ್ತಂಗಡಿ: ಕ್ಷುಲ್ಲಕ ವಿಚಾರಕ್ಕೆ ಹಲ್ಲೆಗೊಳಗಾದ ವ್ಯಕ್ತಿ ಮೃತ್ಯು: ಆರೋಪಿ ಕೃಷ್ಣ.ಡಿ ವಿರುದ್ಧ ಕೊಲೆ ಪ್ರಕರಣ ದಾಖಲು

0
IMG_20220225_183320.jpg

ಧರ್ಮಸ್ಥಳ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಧರ್ಮಸ್ಥಳದ ಕನ್ಯಾಡಿಯಲ್ಲಿ ನಡೆದಿದೆ.

ದಿನೇಶ್ (41) ಕೊಲೆಯಾದಂತಹ ವ್ಯಕ್ತಿ. ಕಿಟ್ಟ @ ಕೃಷ್ಣ.ಡಿ ಕೊಲೆ ಆರೋಪಿ. ದಿನಾಂಕ 23-02-2022 ರಂದು ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ದಿನೇಶ್ ಅವರ ಮನೆಗೆ ಬಂದ ಆರೋಪಿ ಕಿಟ್ಟ @ ಕೃಷ್ಣ.ಡಿ ಜಾಗದ ದಾಖಲೆಗಳನ್ನು ಮಾಡಿಕೊಟ್ಟಿರುವ ವಿಚಾರಕ್ಕೆ ತಗಾದೆ ತೆಗೆದು ದಿನೇಶ್ ಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ.

ಹಲ್ಲೆಗೊಳಲಾದ ದಿನೇಶ್ ಬಳಿಕ ತನ್ನ ತಾಯಿ ಬಳಿ ತೀವ್ರ ಹೊಟ್ಟೆ ನೋವಾಗುತ್ತಿರುವುದಾಗಿ ಹೇಳಿದ್ದಾನೆ. ಕೂಡಲೇ ದಿನೇಶ್ ತಾಯಿ ಪದ್ಮಾವತಿ ಆರೋಪಿ ಕಿಟ್ಟ @ ಕೃಷ್ಣ.ಡಿ ವಿಚಾರ ತಿಳಿಸಿದ್ದು, ನೀನು ಹಲ್ಲೆ ಮಾಡಿದ್ದರಿಂದಲೇ ಆತ ಗಾಯಗೊಂಡಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದಿದ್ದಾರೆ. ಬಳಿಕ ಕಿಟ್ಟ @ ಕೃಷ್ಣ.ಡಿ, ದಿನೇಶ್ ಹಾಗೂ ಆತನ ಪತ್ನಿ ಕವಿತಾಳನ್ನು ಕರೆದುಕೊಂಡು ವೆನ್ಲಾಕ್ ಆಸ್ಪತ್ರೆಗೆ ಹೋಗಿದ್ದಾನೆ. ಅಲ್ಲಿ ದಿನೇಶ್ ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿದ್ದಾನೆ ಎಂದು ಸುಳ್ಳು ಹೇಳಿ ಒಳರೋಗಿಯಾಗಿ ದಾಖಲಿಸಿದ್ದಾನೆ.

ಆದರೆ ಇಂದು ಬೆಳಗ್ಗಿನ.ಜಾವ ದಿನೇಶ್ ಚಿಕಿತ್ಸೆ ಫಲಿಸದೇ ದಿನೇಶ್ ಸಾವನ್ನ್ಪಪಿದ್ದಾನೆ.ಘಟನೆ ಬಳಿಕ‌ ಆರೋಪಿ ಪರಾರಿಯಾಗಿದ್ದು, ಧರ್ಮಸ್ಥಳ ಠಾಣೆಯಲ್ಲಿ ಐಪಿಸಿ ಸೆಕ್ಷನ್ 1860 (u/s302), SC AND THE ST (PREVENTION OF ATTROCITIES) ACT 1989 ಅಡಿಯಲ್ಲಿ ಪ್ರಕರಣ ದಾಖಲಾಗಿದೆ‌.

Leave a Reply

Your email address will not be published. Required fields are marked *

You may have missed

error: Content is protected !!