November 22, 2024

ಶಿವಮೊಗ್ಗ ಹರ್ಷ ಹತ್ಯೆ ಪ್ರಕರಣವನ್ನು ಖಂಡಿಸಿ ವಿ.ಹಿಂ.ಪ., ಭಜರಂಗದಳದ ನೇತೃತ್ವ: ಸುಳ್ಯದಲ್ಲಿ ಪ್ರತಿಭಟನೆ

0

ಸುಳ್ಯ: ಶಿವಮೊಗ್ಗದ ಹರ್ಷ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು ಸುಳ್ಯದ ಖಾಸಗಿ ಬಸ್ಸು ನಿಲ್ದಾಣ ಬಳಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಸರಗೋಡು ಸಂಸ್ಕೃತ ಭಾರತಿ ಜಿಲ್ಲಾ ಸಂಯೋಜಕ ಎಸ್ ಮಂಜುನಾಥ ಉಡುಪ ಕುಂಟಾರು ಈ ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ದಳದಿಂದ ನಡೆಸಬೇಕು ನಮ್ಮ ಆಗ್ರಹಕ್ಕೆ ಸುಳ್ಯದ ಶಾಸಕರೂ, ಸಚಿವರು ಆಗಿರುವ ಅಂಗಾರರೂ ಕೂಡಾ ಧ್ವನಿಯಾಗಬೇಕು ಎಂದು ಹೇಳಿದರು.

ಹರ್ಷ ಹತ್ಯೆಯನ್ನು ಇಬ್ಬರು ಹೆಣ್ಣು ಮಕ್ಕಳನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಮಾಡಲಾಗಿದೆ. ಆದ್ದರಿಂದ ಇದನ್ನು ಎನ್.ಐ.ಎ.ಗೆ ಒಪ್ಪಿಸಬೇಕು. ಸುಳ್ಯದ ಶಾಸಕರೂ ಕೂಡಾ ಈ ಬಗ್ಗೆ ಧ್ವನಿಯಾಗಬೇಕು. ಹಾಗೂ ಸುಳ್ಯದಲ್ಲಿ ಇರುವ ಭಯೋತ್ಪಾದಕರನ್ನು ಬಂಧಿಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.

ಬಿಜೆಪಿ ಬಿಜೆಪಿ ಎಂದು ಜಪ ಮಾಡಿದ ನಮ್ಮ ಕಾರ್ಯಕರ್ತರು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕೆಲಸ ಮಾಡಿದರು. ಅವರಿಗೆ ಅನ್ಯಾಯವಾಗುತ್ತಿದೆ ಎಂದು ಗೊತ್ತಾದ ಮೇಲೂ ಸರಕಾರ ಯಾವ ರೀತಿಯ ರಕ್ಷಣೆ ನೀಡಿದೆ.

ಉಡುಪಿಯಿಂದ ಹಿಜಾಬ್ ಗಲಾಟೆ ಆರಂಭವಾದಾಗ ಸೂಕ್ತ ನಿರ್ಧಾರ ತೆಗೆದುಕೊಳ್ಳದ ನಮ್ಮ ಸರಕಾರ ಮೂರು ದಿನ ರಜೆ ಕೊಟ್ಟಿತ್ತಲ್ಲ ಈ ಸರಕಾರ ಯಾಕೆ ಎಂಬ ಪ್ರಶ್ನೆ ಆಗಲೇ ಮೂಡಿದೆ ಎಂದು ಹೇಳಿದ ಅವರು, ಖಾವಿಧಾರಿ ರಾಜಕಾರಣಿಗಳು ತಮಗೆ ಬೇಕಾದವರಿಗೆ ಮಂತ್ರಿ ಪದವಿ ಸಿಗದಿದ್ದಾಗ ಬೆಂಬಲಿಗರೊಂದಿಗೆ ಪ್ರತಿಭಟನೆ ಮಾಡ್ತಾರೆ. ಆದರೆ ಹರ್ಷನಂತ ಕಾರ್ಯಕರ್ತ ಹತ್ಯೆಯಾದಾಗ ರಾಜ್ಯದ ನಾಲ್ಕು ಸ್ವಾಮೀಜಿಗಳನ್ನು ಹೊರತು ಪಡಿಸಿ ಉಳಿದವರು ಯಾರೂ ಮಾತನಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ವಿ.ಹಿಂ. ಪರಿಷತ್ ಸಂಚಾಲಕ ಸೋಮಶೇಕರ ಪೈಕ, ವರ್ಷಿತ್ ಚೊಕ್ಕಾಡಿ, ಸಂದೀಪ್ ವಳಲಂಬೆ, ಮಹೇಶ್ ಉಗ್ರಾಣಿಮನೆ, ರಂಜಿತ್ ಸುಳ್ಯ, ಪ್ರಕಾಶ ಯಾದವ್, ನಿಕೇಶ್ ಉಬರಡ್ಕ, ನವೀನ್ ಎಲಿಮಲೆ, ಗೋವಿಂದ ಅಳಲುಪಾರೆ, ಕೌಶಲ್ ಸುಳ್ಯ, ಗಿರೀಶ್ ಕಲ್ಲುಗದ್ದೆ ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಮಹೇಶ್ ರೈ ಮೇನಾಲ, ಸಂತೋಷ್ ಕುತ್ತಮೊಟ್ಟೆ ಮೊದಲಾದವರಿದ್ದರು. ಸಂದೀಪ್ ವಳಲಂಬೆ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!