March 22, 2026

ಕಾಸರಗೋಡು: ಹುಟ್ಟುಹಬ್ಬದಂದೇ ಕ್ರೂರವಿಧಿಗೆ ಬಲಿಯಾದ ಪುಟ್ಟ ಬಾಲೆ ದೀಪಿಕಾ

0
IMG_20220223_223321.jpg

ಕಾಸರಗೋಡು: 11 ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಅಪಘಾತಕ್ಕೆ ಸಿಲುಕಿ ಬಾಲಕಿ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಮಂಜೇಶ್ವರದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಮಂಜೇಶ್ವರ ಕಟ್ಟೆಬಜಾರಿನ ರವಿಚಂದ್ರ ಹೆಗ್ಡೆ ರವರ ಪುತ್ರಿ ದೀಪಿಕಾ ( 11) ಮೃತ ದುರ್ದೈವಿಯಾಗಿದ್ದಾಳೆ.

ಬಂಗ್ರ ಮಂಜೇಶ್ವರ ಜಿಎಚ್ಎಸ್ಎಸ್ ನ ಆರನೇ ತರಗತಿ ವಿದ್ಯಾರ್ಥಿನಿಯಾಗಿರುವ ದೀಪಿಕಾ ಹುಟ್ಟುಹಬ್ಬದ ಆಚರಣೆಗೆ ಸಾಮಾಗ್ರಿ ತರಲೆಂದು ಮಂಜೇಶ್ವರಕ್ಕೆ ಅಪ್ಪನ ಜೊತೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ.

ಮಂಜೇಶ್ವರ ಒಳರಸ್ತೆಯ ಗಿಳಿವಿಂಡು ಸಮೀಪ ಇವರು ಸಂಚರಿಸುತ್ತಿದ್ದ ಸ್ಕೂಟರ್ ಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ.

ಡಿಕ್ಕಿಯಿಂದ ಇಬ್ಬರು ರಸ್ತೆ ಬದಿಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ದೀಪಿಕಾ ಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.

ದೀಪಿಕಳ ಅಪ್ಪ ರವಿಚಂದ್ರ ಗಾಯಗೊಂಡಿದ್ದು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಳು ತಾಯಿ ಮಂಗಳ, ಸಹೋದರಿ ದೀಕ್ಷಾ ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ.

ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!