March 22, 2026

ವಿಟ್ಲ: ಕೊಲೆಗೈದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ: ತಂದೆಯಿಂದ ಮಗನ ಬರ್ಬರ ಹತ್ಯೆ

0
image_editor_output_image-863824612-1645635667244

ವಿಟ್ಲ: ವ್ಯಕ್ತಿಯೋರ್ವರ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ, ಮನೆಯಲ್ಲಿ ಪತ್ತೆಯಾದ ಘಟನೆ ವಿಟ್ಲ ಚಂದಳಿಕೆಯ ಕಾಂತಾಮೂಲೆ ಎಂಬಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕಾಂತಾಮೂಲೆ ನಿವಾಸಿ ದಿನೇಶ್(45) ಎಂದು ಗುರುತಿಸಲಾಗಿದೆ.

ದಿನೇಶ್ ರವರ ಮೃತದೇಹವು ಅವರ ಮನೆಯ ರೂಮ್ ನಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದಿನೇಶ್ ಮತ್ತು ಆತನ ತಂದೆ ವಸಂತ ಗೌಡ ಇಬ್ಬರೇ ಮನೆಯಲ್ಲಿ ವಾಸವಿದ್ದು, ಆತನ ತಂದೆಯೇ ಕೊಲೆಗೈದಿರಬಹುದೆಂಬ ಸಂಶಯ ವ್ಯಕ್ತವಾಗಿದೆ. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Leave a Reply

Your email address will not be published. Required fields are marked *

error: Content is protected !!