ವಿಟ್ಲ: ಕೊಲೆಗೈದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ:
ತಂದೆಯಿಂದ ಮಗನ ಬರ್ಬರ ಹತ್ಯೆ
ವಿಟ್ಲ: ವ್ಯಕ್ತಿಯೋರ್ವರ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ, ಮನೆಯಲ್ಲಿ ಪತ್ತೆಯಾದ ಘಟನೆ ವಿಟ್ಲ ಚಂದಳಿಕೆಯ ಕಾಂತಾಮೂಲೆ ಎಂಬಲ್ಲಿ ನಡೆದಿದೆ. ತಂದೆಯೇ ಮಗನನ್ನು ಹತ್ಯೆ ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಕಾಂತಾಮೂಲೆ ನಿವಾಸಿ ದಿನೇಶ್(45) ಎಂದು ಗುರುತಿಸಲಾಗಿದೆ.
ದಿನೇಶ್ ರವರ ಮೃತದೇಹವು ಅವರ ಮನೆಯ ರೂಮ್ ನಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದಿನೇಶ್ ಮತ್ತು ಆತನ ತಂದೆ ವಸಂತ ಗೌಡ ಇಬ್ಬರೇ ಮನೆಯಲ್ಲಿ ವಾಸವಿದ್ದು, ಆತನ ತಂದೆಯೇ ಕೊಲೆಗೈದಿರಬಹುದೆಂಬ ಸಂಶಯ ವ್ಯಕ್ತವಾಗಿತ್ತು. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದರು.

ಕುಡಿದು ಗಲಾಟೆ ಮಾಡಿ ಬಳಿಕ ತಂದೆ ಮಗನ ತಲೆಗೆ ಒಡೆದ ಪರಿಣಾಮ ರಕ್ತಸ್ರಾವ ವಾಗಿ ಮನೆಯಲ್ಲಿಯೇ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಮನೆಯಲ್ಲಿ ತಂದೆ ಮಗ ಇಬ್ಬರೇ ವಾಸಮಾಡಿಕೊಂಡಿದ್ದು, ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದರು.
ಇಬ್ಬರಿಗೂ ಕುಡಿತದ ಚಟ ಇದ್ದು, ಕುಡಿದ ಮತ್ತಿನಲ್ಲಿ ಗಲಾಟೆ ನಡೆದು ಕೊಲೆಯಾಗಿದೆ.
ಬೆಳಿಗ್ಗೆಯಿಂದ ದಿನೇಶ್ ಮನೆಯಿಂದ ಹೊರಗೆ ಯಾಕೆ ಬಂದಿಲ್ಲ ಎಂದು ಸಂಶಯ ಗೊಂಡ ಸ್ಥಳೀಯರು ಹುಡುಕಿದಾಗ ಕೊಲೆಯಾದ ಸ್ಥಿತಿಯಲ್ಲಿ ಈತನ ಮೃತದೇಹ ಮನೆಯೊಳಗೆ ಪತ್ತೆಯಾಗಿದೆ.
ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಅವರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿಯ ಬಂಧನ:
ಘಟನೆ ಬಗ್ಗೆ ಮಾಹಿತಿ ಅರಿತ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿ ವಸಂತ ಗೌಡರನ್ನು ಬಂಧಿಸಿದ್ದಾರೆ.ಫೆ.೨೩ರಂದು ರಾತ್ರಿ ನಮ್ಮಿಬ್ಬರ ಮಧ್ಯೆ ಕಲಹ ನಡೆದಿರುವುದಾಗಿ ಆರೋಪಿ ವಸಂತ ಗೌಡರು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.




