ಶಿವಮೊಗ್ಗದಲ್ಲಿ ಗಲಭೆಗೆ ಪ್ರಚೋದನೆ ಮತ್ತು ಹಿಂಸಾಚಾರಕ್ಕೆ ನೇತೃತ್ವ ನೀಡಿದ ಸಚಿವ ಈಶ್ವರಪ್ಪರನ್ನು ಸಂಪುಟದಿಂದ ವಜಾಗೊಳಿಸಲು ಆಗ್ರಹ: SDPI ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆ
ಸುಳ್ಯ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ, ಸಂಪುಟ ಸಚಿವ ಈಶ್ವರಪ್ಪ ಅವರನ್ನು ಸಂಪುಟ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ, ಮತ್ತು ದೇಶದ್ರೋಹಿ ಹೇಳಿಕೆಯನ್ನು ವಿರೋಧಿಸಿ ಸುಳ್ಯ ಹಳೆ ಬಸ್ ನಿಲ್ದಾಣದ ಬಳಿ ಪ್ರತಿಭಟನಾ ಸಭೆ ನಡೆಯಿತು.

ಈ ಪ್ರತಿಭಟನಾ ಸಭೆಯಲ್ಲಿ SDPI ಸವಣೂರು ಬ್ಲಾಕ್ ಸಮಿತಿ ಅಧ್ಯಕ್ಷರಾದ ರಫೀಕ್ ಸವಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಮಾತನಾಡಿದ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ ಮಾತನಾಡಿ,ಬಿಜೆಪಿ ಮತ್ತು ಸಂಘಪರಿವಾರ ಚುನಾವಣೆ ಹತ್ತಿರ ಬಂದಂತೆ ಮತ್ತೆ ಕೊಲೆ ರಾಜಕೀಯಕ್ಕೆ ಪ್ರಚೋದನೆ ನೀಡುತ್ತಿದೆ ಅದರಂತೆ ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆಯ ನಂತರ ಸಚಿವ ಈಶ್ವರಪ್ಪ ನವರು ನೀಡಿದ ಪ್ರಚೋದನಕಾರಿ ಹೇಳಿಕೆಯಿಂದ ಗಲಭೆ ಮತ್ತು ಹಿಂಸಾಚಾರ ನಡೆದು ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ.

ಹತ್ಯೆಗೈದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿರುವ ಮೊದಲೇ ಒಂದು ಸಮುದಾಯವನ್ನು ಗುರಿಪಡಿಸಿ ಉದ್ರೇಕಕಾರಿ ಹೇಳಿಕೆ ನೀಡಿ ತನಿಖೆಯನ್ನೆ ದಾರಿತಪ್ಪಿಸುವ ಕೆಲಸ ಸಚಿವ ಈಶ್ವರಪ್ಪ ಮಾಡುತ್ತಿದ್ದು ಇವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಹೇಳಿದರು.

ಪ್ರತಿಭಟನೆಯ ನಂತರ ತಹಶೀಲ್ದಾರರ ಮೂಲಕ ವಿಧಾನ ಸಭಾ ಸಭಾಧ್ಯಕ್ಷರಿಗೆ ಮತ್ತು ರಾಜ್ಯಪಾಲರಿಗೆ ಮನವಿಯನ್ನು ನೀಡಲಾಯಿತು.
ಪ್ರತಿಭಟನಾ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ,ಮಹಿಳೆಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಎಸ್ ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿಯಾದ ನಝೀರ್ ಸಿ.ಎ ಸ್ವಾಗತಿಸಿ,
ಸಿದ್ದೀಕ್ ಕೊಡಿಯೆಮ್ಮೆ ನಿರೂಪಿಸಿ ವಂದಿಸಿದರು.




