March 22, 2026

ಕೆ.ಎಸ್. ಈಶ್ವರಪ್ಪರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಎಸ್ ಡಿ ಪಿ ಐ ನಿಂದ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ

0
IMG_20220223_200452.jpg

ಬೆಳ್ತಂಗಡಿ: ಶಿವಮೊಗ್ಗದಲ್ಲಿ ಗಲಭೆಗೆ ಪ್ರಚೋದನೆ ಮತ್ತು ಹಿಂಸಾಚಾರಕ್ಕೆ ನೇತೃತ್ವ ನೀಡಿದ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರ ಮೂರು ಮಾರ್ಗದಿಂದ ತಾಲ್ಲೂಕು ಕಚೇರಿಯವರೆಗೆ , ನೂರಾರು ಸಂಖ್ಯೆಯ ಪಕ್ಷದ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ, ತಾಲ್ಲೂಕು ತಹಸೀಲ್ದಾರ್ ರವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.

ಈಶ್ವರಪ್ಪ ವಿರುದ್ಧ ಘೋಷಣೆ ಕೂಗುತ್ತಾ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಡಿ ಪಿ ಐ ಜಿಲ್ಲಾ ಸಮಿತಿ ಸದಸ್ಯ ನವಾಝ್ ಶರೀಫ್ ಕಟ್ಟೆ , ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಹರ್ಷ ನ ಹತ್ಯೆಯನ್ನು ಗಲಭೆಗೆ ಪ್ರಚೋದನೆ ಮತ್ತು ಹಿಂಸಾಚಾರಕ್ಕೆ ನೇತೃತ್ವ ನೀಡಿ, ಅಶಾಂತಿಯನ್ನು ಸೃಷ್ಟಿ ಮಾಡಿದ ಇವರನ್ನು ಈ ಕೂಡಲೇ ರಾಜ್ಯಸರ್ಕಾರವು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಶಾಸಕ ಸ್ಥಾನವನ್ನು ವಜಾಗೊಳಿಸ ಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ SDPI ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ನಿಸಾರ್ ಕುದ್ರಡ್ಕ, ಇನಾಸ್ ರೋಡ್ರಿಗಸ್, ಹನೀಫ್ ಟಿ ಎಸ್, ಸ್ವಾಲಿ ಮದ್ದಡ್ಕ, ಸ್ವಾದಿಕ್ ಲಾಯಿಲಾ, ಪಂಚಾಯತ್ ಸದಸ್ಯರುಗಳಾದ ಮುಸ್ತಾಫಾ ಜಿ ಕೆ, ರಿಯಾಝ್ ಮದ್ದಡ್ಕ, ಕಬೀರ್ ಕಾಜೂರು ಮತ್ತು ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!