March 21, 2026

ಮೈದಾನದಲ್ಲಿ ಧೂಮಪಾನ ಮಾಡಿದ ಕ್ರಿಕೆಟ್ ಆಟಗಾರ ಮೊಹಮ್ಮದ್ ಶೆಹಜಾದ್: ಛೀಮಾರಿ ಹಾಕಿದ ಬಿಸಿಬಿ

0
FKznnVVaQAEoX1Z.jpeg

ಢಾಕಾ: ಅಫ್ಘಾನಿಸ್ಥಾನದ ಆಟಗಾರ ಮೊಹಮ್ಮದ್ ಶೆಹಜಾದ್ ಅವರು ಕ್ರಿಕೆಟ್ ಮೈದಾನದಲ್ಲಿ ಸಿಗರೇಟ್ ಸೇದಿ ಸುದ್ದಿಯಾಗಿದ್ದಾರೆ. ಢಾಕಾದ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಶೆಹಜಾದ್ ಸಿಗರೇಟ್ ಸೇದಿದ ಚಿತ್ರ ಇದೀಗ ವೈರಲ್ ಆಗಿದೆ.

ಬಿಸಿಬಿ ನೀತಿ ಸಂಹಿತೆಯನ್ನು ಶೆಹಜಾದ್ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಅಫ್ಘಾನ್ ಆಟಗಾರನಿಗೆ ಬಿಸಿಬಿ ಛೀಮಾರಿ ಹಾಕಿದೆ.

ಮೈದಾನದಲ್ಲಿ ಧೂಮಪಾನ ಮಾಡಿವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದನ್ನು ಒಪ್ಪಲಾಗದು. ಒಂದು ವೇಳೆ ಶೆಹಜಾದ್ ಈ ನಿಯಮವನ್ನು ಅರಿತಿಲ್ಲವಾದರೆ ಮ್ಯಾಚ್ ಅಫೀಶಿಯಲ್ಸ್ ಅವರಿಗೆ ಎಚ್ಚರಿಕೆ ನೀಡಬೇಕು ಎಂದು ಬಿಸಿಬಿ ಹೇಳಿದೆ.

ಬಿಸಿಬಿ ನೀತಿ ಸಂಹಿತೆಯ ಆರ್ಟಿಕಲ್ 2.20 ಅನ್ನು ಉಲ್ಲಂಘಿಸಿದ್ದಕ್ಕಾಗಿ ಶೆಹಜಾದ್ ತಪ್ಪಿತಸ್ಥರೆಂದು ಕಂಡುಬಂದಿದೆ. ಹೀಗಾಗಿ, ಅಫ್ಘಾನ್ ವಿಕೆಟ್‌ ಕೀಪರ್‌ ನ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!