ತಮಿಳುನಾಡು: ಜಲಪಾತದ ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆ ಮತ್ತು ಮಗುವನ್ನು ರಕ್ಷಿಸಿದ ಗ್ರಾಮಸ್ಥರು
ತಮಿಳುನಾಡು: ಇಲ್ಲಿನ ಅನೈವಾರಿ ಜಲಪಾತದಲ್ಲಿ ಹಠಾತ್ ಪ್ರವಾಹದಲ್ಲಿ ಸಿಲುಕಿದ ಮಹಿಳೆ ಮತ್ತು ಮಗುವನ್ನು ಗ್ರಾಮಸ್ಥರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ್ದಾರೆ.
ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ ಆಗಿದೆ. ನಾಲ್ವರು ಗ್ರಾಮಸ್ಥರು ಅವರ ರಕ್ಷಣೆಗೆ ಬಂದಿದ್ದು, ಅವರನ್ನು ಹಗ್ಗದಿಂದ ಮೇಲಕ್ಕೆ ಎಳೆದುಕೊಂಡು ಬರುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಮಹಿಳೆ ಮತ್ತು ಮಗುವನ್ನು ರಕ್ಷಿಸಿದ ನಂತರ, ರಕ್ಷಣೆಗೆ ಬಂದ ಇಬ್ಬರು ಗ್ರಾಮಸ್ಥರು ಹಗ್ಗವನ್ನು ಬಳಸಿ ಸುರಕ್ಷಿತವಾಗಿ ಮರಳಲು ಪ್ರಯತ್ನಿಸುವ ವೇಳೆ ನೀರಿನ ರಭಸಕ್ಕೆ ಕಾಲು ಜಾರಿ ಬಿದ್ದಿದ್ದಾರೆ. ಆದರೆ, ಅವರು ಸಮೀಪದ ದಡಕ್ಕೆ ಈಜುವಲ್ಲಿ ಯಶಸ್ವಿಯಾದರು.
ಅನೈವಾರಿ ಜಲಪಾತವು ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಭಾನುವಾರದಂದು ಜನರು ಹಠಾತ್ ಪ್ರವಾಹವನ್ನು ನಿರೀಕ್ಷಿಸದೆ ಪ್ರದೇಶದಲ್ಲಿ ಜಮಾಯಿಸಿದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಜಲಪಾತಕ್ಕೆ ಸಾರ್ವಜನಿಕರು ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ.





