ಎಚ್.ಡಿ ಕುಮಾರಸ್ವಾಮಿಯವರನ್ನು ಜಾಗ ನೀಡಿ ಸಾಕಿದ್ದು ನಾನೇ: ಶಾಸಕ ಝಮೀರ್ ಅಹ್ಮದ್ ಖಾನ್
ಹುಬ್ಬಳ್ಳಿ: ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜಾಗ ನೀಡಿ ಸಾಕಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ತಿರುಗೇಟು ಹೇಳಿದ್ದಾರೆ. ‘ಝಮೀರ್ ಅಹ್ಮದ್ ಬಸ್ ಚಾಲಕನಾಗಿದ್ದ’ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಅವರು ಈ ರೀತಿ ತಿರುಗೇಟು ನೀಡಿದ್ದಾರೆ.
ನಾನು ಬಸ್ ಚಾಲಕನಾಗಿ, ಮಾಲೀಕನೂ ಆಗಿದ್ದೆ. ಆದರೆ, ಅವರ ಹಾಗೆ ಕಸ ಹೊಡೆಯುತ್ತಿರಲಿಲ್ಲ. ಆಗ ಕುಮಾರಸ್ವಾಮಿ ಟ್ರಾನ್ಸ್‌ಪೋರ್ಟ್ ಲೆಕ್ಕ ನೀಡಲು ನಮ್ಮ ಕಚೇರಿಗೆ ಅಲೆದಾಡುತ್ತಿದ್ದರು. ಅವರಿಗೆ ಕುಳಿತುಕೊಳ್ಳಲು ಜಾಗವಿಲ್ಲದ ಸಂದರ್ಭದಲ್ಲಿ ಜಾಗ ನೀಡಿ ನಾನು ಸಾಕಿದ್ದೇನೆ. ನನ್ನಿಂದಲೇ ಅನುಕೂಲ ಪಡೆದು, ಈಗ ದೊಡ್ಡವರಾಗಿದ್ದಾರೆ. ನಿಮ್ಮನ್ನು ಆನೆ ಮಾಡಿದ್ದು ಯಾರು’ ಎಂದು ಝಮೀರ್ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಯಾಗಿದ್ದವರು ಕೀಳಾಗಿ ಮಾತನಾಡಬಾರದು. ನನ್ನ ಪಾಡಿಗೆ ನಾನು ಇದ್ದೇನೆ. ನಿಮ್ಮ ಪಾಡಿಗೆ ನೀವು ಇರಿ. ನನ್ನ ಕೆಣಕಿದರೆ ಸುಮ್ಮನಿರುವುದಿಲ್ಲ ಎಂದು ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ. ನಾನು ಯಾವತ್ತೂ ನಮ್ಮ ಬಸ್ ಕ್ಲೀನ್ ಮಾಡಿಲ್ಲ. ಕುಮಾರಸ್ವಾಮಿ ಅವರಿಗೆ ಕುಳಿತುಕೊಳ್ಳಲು ಜಾಗವಿರಲಿಲ್ಲ. ನಮ್ಮ ಕಚೇರಿಗೆ ಬಂದು ನಾಲ್ಕು ಗಂಟೆಗಳ ಕಾಲ ಕುಳಿತುಕೊಳ್ಳುತ್ತಿದ್ದರು. ಕುಮಾರಸ್ವಾಮಿ ಅವರಿಗೆ ಜಾಗ ಕೊಟ್ಟಿದ್ದೇನೆ. ಅವರ ಹಾಗೆ ನಾನು ಬಿಬಿಎಂಪಿಯಲ್ಲಿ ಕಸ ಗುಡಿಸಿಲ್ಲ. ಅವರ ಬಗ್ಗೆ ಹೇಳೋದಕ್ಕೆ ಇನ್ನೂ ಬಹಳಷ್ಟು ಇದೆ. ಸುಮ್ಮನೆ ನನ್ನ ಕೆಣಕಬೇಡಿ ಕುಮಾರಸ್ವಾಮಿ ಅವರೇ ಎಂದು ಎಚ್ಚರಿಕೆ ನೀಡಿ, ಕುಮಾರಸ್ವಾಮಿಯವರನ್ನು ನಾನೇ ಸಾಕಿದ್ದೇನೆ ಎಂದು ಹೇಳಿದರು.





