March 19, 2026

ಸಾಮಾನ್ಯ ವ್ಯಕ್ತಿಯನ್ನು ಮದುವೆಯಾದ ಜಪಾನಿನ ರಾಜಕುಮಾರಿ:
ರಾಜಮನೆತನದ ಸ್ಥಾನಮಾನ ಕಳೆದುಕೊಂಡ ಮಾಕೊ

0
image_editor_output_image-1408928788-1635231905201.jpg

ಟೋಕಿಯೊ: ಜಪಾನಿನ ರಾಜಕುಮಾರಿ ಮಾಕೊ ಅವರು ಸಾಮಾನ್ಯ ವ್ಯಕ್ತಿಯನ್ನು ವಿವಾಹವಾದ ಕಾರಣ, ರಾಜಮನೆತನದ ಸ್ಥಾನಮಾನಗಳನ್ನು ಮಂಗಳವಾರ ಕಳೆದುಕೊಂಡರು.

ಮಾಕೊ ಮತ್ತು ಕೀ ಕೊಮುರೊ ಅವರ ವಿವಾಹದ ದಾಖಲೆಯನ್ನು ಅರಮನೆಯ ಅಧಿಕಾರಿಯೊಬ್ಬರು ಮಂಗಳವಾರ ಬೆಳಿಗ್ಗೆ ಸಲ್ಲಿಸಿದ್ದಾರೆ ಎಂದು ಇಂಪೀರಿಯಲ್ ಹೌಸ್‌ಹೋಲ್ಡ್ ಏಜೆನ್ಸಿ ತಿಳಿಸಿದೆ.

ದಂಪತಿಯ ಮದುವೆಗೆ ಸಂಬಂಧಿಸಿದಂತೆ ಯಾವುದೇ ಔತಣಕೂಟ ಮತ್ತು ಆಚರಣೆಗಳು ಇರುವುದಿಲ್ಲ. ಅವರ ಮದುವೆಯನ್ನು ಅನೇಕ ಜನರು ಆಚರಿಸುವುದಿಲ್ಲ ಎಂದು ಏಜೆನ್ಸಿ ಹೇಳಿದೆ.

30ರ ವಯಸ್ಸಿನ ಮಾಕೊ, ಚಕ್ರವರ್ತಿ ನರುಹಿಟೊ ಅವರ ಸೊಸೆ. ಟೋಕಿಯೊದ ಇಂಟರ್‌ನ್ಯಾಷನಲ್‌ ಕ್ರಿಶ್ಚಿಯನ್‌ ಯುನಿವರ್ಸಿಟಿಯಲ್ಲಿ ಮಾಕೊ ಮತ್ತು ಕೀ ಕೊಮುರೊ ಸಹಪಾಠಿಗಳಾಗಿದ್ದರು. 2017ರಲ್ಲಿಯೇ ಅವರು ಮುಂದಿನ ವರ್ಷ ವಿವಾಹವಾಗಲು ಉದ್ದೇಶಿಸಿರುವುದಾಗಿ ಘೋಷಿಸಿದ್ದರು. ಆದರೆ ಹಣಕಾಸು ವ್ಯವಹಾರ ಸಂಬಂಧಿತ ಬಿಕ್ಕಟ್ಟಿನಿಂದಾಗಿ ಮದುವೆಯಾಗುವುದು ವಿಳಂಬವಾಗಿತ್ತು.

ಮಾಕೊ ಅವರು ಮಂಗಳವಾರ ಬೆಳಿಗ್ಗೆ ತೆಳು ನೀಲಿ ಬಣ್ಣದ ಬಟ್ಟೆ ಧರಿಸಿ ಹೂಗುಚ್ಛ ಹಿಡಿದು ಅರಮನೆಯಿಂದ ನಿರ್ಗಮಿಸಿದರು. ಅವರು ನಿವಾಸದ ಹೊರಗೆ ತನ್ನ ಪೋಷಕರಾದ ರಾಜ ಅಕಿಶಿನೊ ಮತ್ತು ರಾಣಿ ಕಿಕೊ ಮತ್ತು ಸಹೋದರಿ ಕಾಕೊ ಅವರಿಗೆ ನಮಸ್ಕರಿಸಿದಳು. ಬಳಿಕ ಸಹೋದರಿಯರು ಒಬ್ಬರನ್ನೊಬ್ಬರು ಆಲಿಂಗಿಸಿದರು.

Leave a Reply

Your email address will not be published. Required fields are marked *

error: Content is protected !!