March 26, 2026

ಮಂಗಳೂರು: ಮೀನುಗಾರಿಕಾ ಬಲೆಗೆ ಸಿಕ್ಕ 1,500ಕ್ಕೂ ಹೆಚ್ಚು ತೂಕದ ಶಾರ್ಕ್ ಮೀನು

0
Screenshot_2021-10-26-12-49-06-63_680d03679600f7af0b4c700c6b270fe7.jpg

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಬೃಹತ್ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ ಬೋಟ್ ನ ಮೀನುಗಾರರಿಗೆ ಈ ಮೀನು ದೊರಕಿದೆ.

ಶಾರ್ಕ್ ಜಾತಿಗೆ ಸೇರಿದ ಮೀನು ಇದಾಗಿದ್ದು, ಈ ಮೀನು ಹಿಡಿಯುವುದು ನಿಷೇಧವಿದೆ. ಹೀಗಾಗಿ ಬಲೆಗೆ ಸಿಕ್ಕ‌ ಮೀನನ್ನು ಮೀನುಗಾರರು ಬಲೆಯಿಂದ ಬಿಡಿಸಿ ವಾಪಾಸು ಸಮುದ್ರಕ್ಕೆ ಬಿಟ್ಟಿದ್ದಾರೆ.

ಸುಮಾರು 1,500 ಕ್ಕೂ ಹೆಚ್ಚು ತೂಕ ಈ ಮೀನು ಹೊಂದಿದ್ದು ಮೀನು ಸೆರೆ ಸಿಕ್ಕ ದೃಶ್ಯವನ್ನು ಬೋಟ್ ನಲ್ಲಿದ್ದ ಮೀನುಗಾರರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

Leave a Reply

Your email address will not be published. Required fields are marked *

error: Content is protected !!