ಚುನಾವಣೆ ಹತ್ತಿರ ಇರುವಾಗ ಇತರೆ ಜಿಲ್ಲೆ ಉಸ್ತುವಾರಿ ನೀಡಿರುವುದು ಸರಿಯಲ್ಲ: ಸಚಿವ ಮಾಧುಸ್ವಾಮಿ
ತುಮಕೂರು: ಚುನಾವಣೆ ಹತ್ತಿರ ಇರುವಾಗ ಸ್ಥಳೀಯ ಜಿಲ್ಲೆ ಹೊರತುಪಡಿಸಿ ಇತರೆ ಜಿಲ್ಲೆ ಉಸ್ತುವಾರಿ ನೀಡಿರುವುದು ಸರಿಯಲ್ಲ ಎಂದು ಸಚಿವ ಮಾಧುಸ್ವಾಮಿ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಜಿಲ್ಲೆಗಳನ್ನು ಹೊರತುಪಡಿಸಿ ಸಚಿವರಿಗೆ ಇತರೆ ಜಿಲ್ಲೆಗಳಿಗೆ ಉಸ್ತುವಾರಿ ನೀಡಿರುವುದು ಸರಿಯಲ್ಲ. ಪ್ರಮುಖವಾಗಿ ಚುನಾವಣೆ ಹತ್ತಿರ ಇರುವಾಗ ಇಂತಹ ನಿರ್ಧಾರಗಳು ಅನಾವಶ್ಯಕ ಎಂದು ಹೇಳಿದ್ದಾರೆ.
ನನಗೆ ಉಸ್ತುವಾರಿ ತಪ್ಪಿದ್ದರಿಂದ ಯಾವುದೇ ರೀತಿಯ ಅಸಮಾಧಾನವಿಲ್ಲ. ಆದರೆ ತುಮಕೂರು ಜಿಲ್ಲೆ ಕೊಟ್ಟಿದ್ದರೆ ಸಂತೋಷ ಆಗುತ್ತಿತ್ತು. ಇನ್ನು ಏಳೆಂಟು ತಿಂಗಳಲ್ಲಿ ಚುನಾವಣೆ ಪರ್ವ ಪ್ರಾರಂಭವಾಗುತ್ತೆ. ಬೇರೆ ಜಿಲ್ಲೆಗೆ ಹೋಗಿ ನಾವು ಏನೂ ಮಾಡಕಾಗಲ್ಲ. ತವರು ಜಿಲ್ಲೆ ಉಸ್ತುವಾರಿ ಕೊಡದೇ ಇರುವುದು ಒಂದು ಹೊಸ ಪ್ರಯೋಗ. ಇದನ್ನು ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಮಾಡಿದ್ದರು. ಆಗ ಅದು ವಿಫಲ ಆಗಿತ್ತು. ADVERTISEMENTnull
ಬೇರೆ ಜಿಲ್ಲೆಯಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಗೊತ್ತಾಗದೇ ಇರುವುದರಿಂದ ಅಲ್ಲಿ ನಾವು ಬೇರೆಯವರ ಮೇಲೆ ಅವಲಂಬನೆಯಾಗಬೇಕಾಗುತ್ತದೆ. ಇಲ್ಲ ಅಂದರೆ ಅಧಿಕಾರಿಗಳು ಹೇಳಿದ ಹಾಗೆ ಕೇಳಬೇಕಾಗುತ್ತೆ. ಆರಂಭದಲ್ಲಿ ಹಾಸನ ಜಿಲ್ಲೆ ಉಸ್ತುವಾರಿ ಕೆಲಸ ಮಾಡಿದ್ದೆ, ಅದು ಹತ್ತಿರದ ಜಿಲ್ಲೆ ಅಂತಾ ಮಾಡಿದ್ದೆ. ತುಮಕೂರು ಜಿಲ್ಲೆ ಉಸ್ತುವಾರಿ ನನಗೆ ತೃಪ್ತಿ ತಂದಿದೆ. ಪಕ್ಷ ಭೇದ ಮರೆತು ಎಲ್ಲ ಶಾಸಕರ ಕ್ಷೇತ್ರದಲ್ಲೂ ಒಳ್ಳೆಯ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಉಸ್ತುವಾರಿ ಸಚಿವರು ಹತ್ತಿರದಲ್ಲಿರಬೇಕು. ಜಿಲ್ಲಾಡಳಿತದ ಜೊತೆ ವಾರಕ್ಕೆ ಒಂದೆರಡು ಬಾರಿಯಾದರೂ ಸ್ಪಂದಿಸುವ ರೀತಿ ಇರಬೇಕು. ಯಾವುದೋ ಒಂದು ಕೆಡಿಪಿ ಸಭೆಗೆ ಮಾತ್ರ ಸೀಮಿತವಾಗುವುದು, ನ್ಯಾಷನಲ್ ಪ್ರೋಗ್ರಾಂನಲ್ಲಿ ಧ್ವಜಾರೋಹಣ ಮಾಡೋದು ಅಷ್ಟೇ ಆದರೆ ಬೇರೆ ಜಿಲ್ಲೆಗೆ ಹೋಗಿ ಮಾಡಬಹುದು. ಆದರೆ, ಪ್ರತಿ ಜಿಲ್ಲೆಯಲ್ಲಿ ನಾಯಕತ್ವದ ಅಗತ್ಯವಿದೆ ಎಂದಿದ್ದಾರೆ.
ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಅವರು ಮಾತನಾಡಿ, ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.





