December 4, 2024

ಐಸಿಸಿ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂದನಾ ಆಯ್ಕೆ

0

ದುಬೈ:  ಭಾರತೀಯ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮೃತಿ ಮಂದನಾ ಅವರು 2021ರ ಐಸಿಸಿ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಆಯ್ಕೆಯಾಗಿದ್ದಾರೆ.

ಮಂದನಾ ಅವರು 2018ರಲ್ಲಿ ಈ ಮೊದಲು ಪ್ರಶಸ್ತಿ ಸ್ವೀಕರಿಸಿದ್ದದ್ದು, ಇದೀಗ 2021ರ ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿ ಮೂಲಕ ಎರಡು ಬಾರಿ ಈ ಪ್ರಶಸ್ತಿ ಪಡೆದ ಭಾರತೀಯ ಏಕೈಕ ಆಟಗಾರ್ತಿ ಎಂಬ ದಾಖಲೆಯನ್ನು ಕೂಡ ಬರೆದಿದ್ದಾರೆ.
ಇನ್ನು 2021ರಲ್ಲಿ ಸ್ಮೃತಿ ಮಂದನಾ 22 ಪಂದ್ಯಗಳನ್ನು ಆಡಿ ಒಂದು ಶತಕ ಹಾಗೂ ಐದು ಅರ್ಧ ಶತಕಗಳೊಂದಿಗೆ 855 ರನ್ ಗಳನ್ನು ಗಳಿಸಿದ್ದು, ಇಂಗ್ಲೆಂಡ್ ವಿರುದ್ಧ ನಡೆದಿದ್ದ ಏಕೈಕ ಟೆಸ್ಟ್ ನಲ್ಲಿ 78 ರನ್ ಗಳಿಸಿ ಟೆಸ್ಟ್ ಪಂದ್ಯ ಡ್ರಾ ಆಗಲು ಶ್ರಮಿಸಿದ್ದರು.
ಸ್ಮೃತಿ ಅವರು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ನಡೆದ ಟಿ20 ಲೀಗ್‌ಗಳಲ್ಲಿ ಒಳ್ಳೆಯ ಪ್ರದರ್ಶನ ತೋರಿದ್ದು, ಅದರಲ್ಲಿ 7 ಪಂದ್ಯಗಳಲ್ಲಿ 167 ರನ್ ಗಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!