ಹಿಜಾಬ್ ವಿವಾದ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಣ ಸಂಸ್ಥೆ ಕುಳಿತು ಬಗೆಹರಿಸಿಕೊಳ್ಳಲಿ: ಶಾಸಕ ಯು.ಟಿ ಖಾದರ್
ಮಂಗಳೂರು: ಕರಾವಳಿಯ ಶಾಲಾ-ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಸಣ್ಣ ವಿಚಾರ.ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಣ ಸಂಸ್ಥೆ ಕುಳಿತು ಬಗೆಹರಿಸಿಕೊಳ್ಳಬೇಕು ಎಂದು ಶಾಸಕ ಯು.ಟಿ ಖಾದರ್ ಸಲಹೆ ನೀಡಿದ್ದಾರೆ.
ಈ ಬಗ್ಗೆ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿ ವಿದ್ಯಾರ್ಥಿನಿಯರ ವಿದ್ಯಾಭ್ಯಾಸ ಮುಖ್ಯವಾಗಿರುತ್ತದೆ.
ಇದರಲ್ಲಿ ರಾಜಕೀಯ ಮಾಡಬಾರದು. ಸ್ಥಳೀಯವಾಗಿ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಈ ವಿಷಯದಲ್ಲಿ ಪಾಕಿಸ್ತಾನದ ವಿಚಾರ ತಂದು ಕಾಮೆಂಟ್ ಮಾಡೊದು ಅಪ್ರಸ್ತುತ.
ಪಾಕಿಸ್ಥಾನದಂತಹ ಪರಿಸ್ಥಿತಿ ಇಲ್ಲಿ ಇಲ್ಲ. ಅಲ್ಲಿ ಶಾಲೆಗೆ ಹೋಗಿ ಚಿಕ್ಕ ಮಕ್ಕಳಿಗೆ ಗುಂಡು ಹೊಡೆಯುತ್ತಾರೆ.
ಈ ವಿಚಾರವನ್ನು ನನ್ನ ಬಳಿ ಯಾರು ತಂದಿಲ್ಲ. ಕಾಲೇಜು ಕ್ಯಾಂಪಸ್ ಒಳಗೆ ಹೋದ ವಿದ್ಯಾರ್ಥಿಗಳ ಬಗ್ಗೆ ವಿದ್ಯಾರ್ಥಿ ಸಂಘಟನೆ ಚಿಂತಿಸಬೇಕಿಲ್ಲ ಎಂದು ಖಾದರ್ ಹೇಳಿದ್ದಾರೆ.





