February 4, 2026

ಮಂಗಳೂರಿನಿಂದ ಬೆಳಗಾವಿಗೆ ಅನಿಲ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಪಲ್ಟಿ: ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆ

0
IMG_20220125_144101.jpg

ಕುಮಟಾ: ಮಂಗಳೂರಿನಿಂದ ಬೆಳಗಾವಿ ಕಡೆ ಸಾಗಿಸುತ್ತಿದ್ದ ಅನಿಲ ತುಂಬಿದ ಟ್ಯಾಂಕರ್ ಪಲ್ಟಿಯಾದ ಘಟನೆ ಹೊನಮಾಂವ ದೇವಸ್ಥಾನದ ಬಳಿ ಇಂದು ನಡೆದಿದೆ.

ಮಂಗಳೂರಿನಿಂದ ಬೆಳಗಾವಿಗೆ ಸಾಗಿಸುತ್ತಿದ್ದಾಗ ಲಾರಿಯ ಸಂಪರ್ಕ ತಪ್ಪಿದ ಟ್ಯಾಂಕರ್ ಕೆಳಗೆ ಉರುಳಿತು. ಆಗ ಟ್ಯಾಂಕರ್‌ನ ಸುರಕ್ಷಿತ ವಾಲ್ವ್ ಸಡಿಲಗೊಂಡು ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆ ಉಂಟಾಗಿತ್ತು.

ಅದನ್ನು ತಕ್ಷಣ ನಿಲ್ಲಿಸಲಾಯಿತು. ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಒಳರಸ್ತೆ ಮೂಲಕ ಹೆದ್ದಾರಿ ಸಂಪರ್ಕಿಸುವಂತೆ ಕ್ರಮ ಕೈಗೊಳ್ಳಲಾಯಿತು.

ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಪಿ.ಎಸ್.ಐ ನವೀನ್ ನಾಯ್ಕ ಮಾಹಿತಿ‌ ನೀಡಿದರು.

Leave a Reply

Your email address will not be published. Required fields are marked *

error: Content is protected !!