February 1, 2026

ದ.ಕ ಜಿಲ್ಲೆಯಲ್ಲಿ ಜ. 31ರ  ವರೆಗೆ ಕೋವಿಡ್-19 ನಿರ್ಬಂಧ ಮುಂದುವರಿಕೆ ಮುಂದುವರಿಕೆ: ಜಿಲ್ಲಾಧಿಕಾರಿ ಆದೇಶ

0
IMG_20220113_161917.jpg

ಮಂಗಳೂರು:  ಕೋವಿಡ್-19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದನ್ನು ನಿಯಂತ್ರಿಸಲು, ಪರೀಕ್ಷೆ-ಪತ್ತೆ-ಚಿಕಿತ್ಸೆ-ಲಸಿಕಾಕರಣ ಮತ್ತುಕೋವಿಡ್ 19 ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಐದು ತಂತ್ರಗಳ ಮೇಲೆ ನಿರಂತರ ಗಮನ ಹರಿಸುವ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಜ. 31ರ ಬೆಳಿಗ್ಗೆ ಗಂಟೆ 5 ವರೆಗೆ ಕೋವಿಡ್-19 ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿ ಜಿಲ್ಲಾಡಳಿತದಿಂದ ಆದೇಶ ಹೊರಡಿಸಲಾಗಿದೆ.

ಜಿಲ್ಲೆಯಾದ್ಯಂತ ಈಗಾಗಲೇ ಶುಕ್ರವಾರರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ ೫ಗಂಟೆಯವರೆಗೆ ವಿಧಿಸಲಾಗಿದ್ದ ವಾರಾಂತ್ಯದಕರ್ಪ್ಯೂ ಹಿಂಪಡೆಯಲಾಗಿದೆ.ಅದಾಗ್ಯೂ, ಎಲ್ಲಾ ದಿನಗಳಲ್ಲಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಜಿಲ್ಲೆಯಾದ್ಯಂತ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಪ್ಯೂ ಜಾರಿಯಲ್ಲಿರುತ್ತದೆ. ಉಳಿದಂತೆ ಇತರೆ ಎಲ್ಲಾ ನಿರ್ಬಂಧಗಳು ಯಥಾವತ್ತಾಗಿ ಮುಂದುವರೆಯುತ್ತದೆ.

ಎಲ್ಲಾ ರ್‍ಯಾಲಿಗಳು, ಧರಣಿಗಳು, ಸಭೆಗಳು, ಸಮುದಾಯ, ಕಾರ್ಮಿಕ ಆಚರಣೆಗಳು, ರಾಜಕೀಯ ಪ್ರತಿಭಟನೆಗಳು, ಯಾವುದೇರೀತಿಯ ಮೆರವಣಿಗೆಗಳಾಗದಂತಹ ಸಾಮಾಜಿಕ, ಧಾರ್ಮಿಕ, ರಾಜಕೀಯ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ವಿಧಿಸಿದೆ ಎಂದು ಪುನರುಚ್ಚರಿಸಲಾಗಿದೆ.

ರಾಜ್ಯ ಸರ್ಕಾರದಚಾಲ್ತಿಯಲ್ಲಿರುವ ಮಾರ್ಗಸೂಚಿಯಂತೆಕೋವಿಡ್ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಹೊರಾಂಗಣ ಪ್ರದೇಶಗಳಲ್ಲಿ 200 ಜನರು ಮತ್ತು ಒಳಾಂಗಣ ಪ್ರದೇಶಗಳಲ್ಲಿ 100 ಜನರಿಗೆ ಮಿತಿಗೊಳಿಸಿ ಮದುವೆಯನ್ನು ನಡೆಸಲುಅನುಮತಿ ನೀಡಲಾಗಿದೆ.
ಕೋವಿಡ್‌ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಮತ್ತು 2 ಡೋಸ್‌ಗಳ ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾತ್ರ ಆಸನ ಸಾಮರ್ಥ್ಯವನ್ನುಶೇ. 50ಕ್ಕೆ ಮಿತಿಗೊಳಿಸಿ ಪಬ್‌ಗಳು/ ಕ್ಲಬ್‌ಗಳು ರೆಸ್ಟೋರೆಂಟ್‌ಗಳು, ಬಾರ್‌ಗಳು, ಹೋಟೆಲ್‌ಗಳಲ್ಲಿ ಆಹಾರ ಸೇವಿಸಲು ಅನುಮತಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!