July 6, 2026

ಸುಳ್ಯದಲ್ಲಿ ಹೆಚ್ಚುತ್ತಿರುವ ವಾಹನ ಅಪಘಾತ: ಲಾರಿಗೆ ರಿಕ್ಷಾ ಗುದ್ದಿ ಮಹಿಳೆ ಗಂಭೀರ

0
IMG_20220124_205303.jpg

ಸುಳ್ಯ: ಕಳೆದ ಒಂದು ವಾರದಿಂದ ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ವಾಹನ ಅಪಘಾತಗಳು ಹೆಚ್ಚುತ್ತಿದ್ದು ಇಂದು ಸುಳ್ಯದಿಂದ ಅರಂಬೂರಿಗೆ ಹೋಗುತ್ತಿದ್ದ ರಿಕ್ಷಾವೊಂದು ಅತಿ ವೇಗದಿಂದ ಚಲಿಸಿ ಹತ್ತು ಚಕ್ರದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾದಲ್ಲಿದ್ದ ಮಹಿಳೆ ತೀವ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲ್ಪಟ್ಟ ಘಟನೆ ಜನವರಿ 24ರಂದು ಸಂಜೆ ವರದಿಯಾಗಿದೆ.

ಬಳ್ಳಡ್ಕದ ಪುರುಷೋತ್ತಮ ಎಂಬವರ ರಿಕ್ಷಾದಲ್ಲಿ ಅರಂಬೂರಿನ ಬೇಬಿ, ಸೀತು ಮತ್ತು ಗಣೇಶ್ ಎಂಬವರು ಅರಂಬೂರು ಕಡೆಗೆ ಹೋಗುತ್ತಿದ್ದರು.
ಪರಿವಾರಕಾನ ದಾಟಿ ಮುಂದೆ ಹೋಗುತ್ತಿದ್ದಂತೆ ಅತಿ ವೇಗದಿಂದ ಚಲಾಯಿಸಲ್ಪಡುತ್ತಿದ್ದ ರಿಕ್ಷಾ, ಬೈಕ್ ಮತ್ತು ಜೀಪೊಂದನ್ನು ಓವರ್ ಟೇಕ್ ಮಾಡಿ ಮುನ್ನುಗ್ಗುತ್ತಾ ಎದುರಿನಿಂದ ಬರುತ್ತಿದ್ದ ಹತ್ತು ಚಕ್ರದ ಲಾರಿಗೆ ಡಿಕ್ಕಿ ಹೊಡೆಯಿತೆಂದು ತಿಳಿದು ಬಂದಿದೆ.

ಪರಿಣಾಮವಾಗಿ ರಿಕ್ಷಾದಲ್ಲಿದ್ದ ಬೇಬಿ ಎಂಬವರು ತೀವ್ರ ಗಾಯಗೊಂಡರು. ಸೀತು ರವರಿಗೂ ಹಣೆಗೆ ಏಟಾಯಿತು.
ತಕ್ಷಣ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು. ತೀವ್ರ ಗಾಯಗೊಂಡಿದ್ದ ಬೇಬಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!