November 30, 2026

ಮಂಚಿ :  ಗೌಸಿಯಾ ಅಸೋಸಿಯೇಷನ್ ವತಿಯಿಂದ ವೈದ್ಯಕೀಯ ಸಲಕರಣೆ ಲೋಕಾರ್ಪಣೆ ಮತ್ತು ರಕ್ತದಾನ ಶಿಬಿರ

0
IMG-20261130-WA0007

ಬಂಟ್ವಾಳ:* ಮಂಚಿ – ಕೊಳ್ನಾಡು ಗೌಸಿಯಾ ಅಸೋಸಿಯೇಷನ್ ವತಿಯಿಂದ ವೈದ್ಯಕೀಯ ಸಲಕರಣೆ ಲೋಕಾರ್ಪಣೆ ಮತ್ತು ಯೆನೆಪೋಯ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ರಕ್ತದಾನ ಶಿಬಿರ ಭಾನುವಾರ ಮಂಚಿ ಶಾಲಾ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಯಾವುದೇ ಜಾತಿ,ಮತ ಭೇದವಿಲ್ಲದೆ  ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದ ಅವರು ಈ ನಿಟ್ಟಿನಲ್ಲಿ ಅವಶ್ಯಕತೆ ಇದ್ದವರಿಗೆ ವೈದ್ಯಕೀಯ ಸಲಕರಣೆಯನ್ನು ಒದಗಿಸುವ ಕಾರ್ಯ ಹಮ್ಮಿಕೊಂಡ ಗೌಸಿಯಾ ಅಸೋಸಿಯೇಷನ್ ನ ಕಾರ್ಯ ಶ್ಲಾಘನೀಯ ಎಂದರು.

ಗೌಸಿಯಾ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೈಯೂರ್ ಸುನ್ನಿ ಮಹಲ್ ನ ಅಬೂಬಕ್ಕರ್ ಲತೀಫಿ ದು:ಹಾ ಹಾಗೂ ಮಂಚಿ ರಿಫಾಯಿಯ ಮದರಸ ಮುಖ್ಯ ಶಿಕ್ಷಕ ಅಬ್ದುಲ್ ರಝಾಕ್ ಸಅದಿ ಕಿರಾಅತ್ ನೆರವೇರಿಸಿದರು.

ಅತಿಥಿಗಳಾಗಿ ಭಾಗವಹಿಸಿದ್ದ ದ.ಕ.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಸ್ಡಿಪಿಐ ದ.ಕ.ಜಿಲ್ಲಾದ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಬಂಟ್ವಾಳ ಕೆಡಿಪಿ ಸದಸ್ಯ
ಎ.ಬಿ.ಅಬ್ದುಲ್ಲ , ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕಾದ್ಯಕ್ಷ  ಬಿ.ಎಂ.ಅಬ್ಬಾಸ್ ಅಲಿ,  ನಾರಾಯಣ ಭಟ್ ನೂಜಿಬೈಲು, ಡಾ. ನವೀನ್ ಚಂದ್ರ ಕುಶಾಲ್, ಡಾ. ಗಣೇಶ್ ಪ್ರಸಾದ್, ಮಂಗಳೂರು ಯುನಿವರ್ಸಿಟಿ ಪ್ರೊಫೆಸರ್ ಡಾ. ಪಟ್ಟಣ್ಣ ಕೆ , ನ್ಯಾಯವಾದಿ ಇಜಾಝ್ ಅಹ್ಮದ್, ಪತ್ರಕರ್ತ ಲತೀಫ್ ನೇರಳಕಟ್ಟೆ, ಕೆ.ಬಿ.ಎಸ್. ನೌಫಳ್ ಕುಡ್ತಮುಗೇರ್,  ಮಂಚಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬದ್ರುದ್ದೀನ್ ಕಾರ್ಯಕ್ರಮವನ್ನು ದ್ದೇಶಿಸಿ ಮಾತನಾಡಿದರು.

ಬಹಾದ್ದೂರ್ ಗ್ರೂಪ್ ಆಫ್ ಕಂಪೆನೀಸ್ ಮಾಲಕ ಜೈನುಲ್ ಅಬಿದ್ ಲಕ್ಷೀಶ್ವರ, ಅಶ್ರಫ್ ಚೊಯಿಸ್  ಗೋಲ್ಡ್, ಶಾಫಿ ಕಲ್ಲಡ್ಕ, ಮ್ಯಾಕ್ಸಿಮ್ ಫೆರ್ನಾಂಡಿಸ್, ಸುಲೈಮಾನ್ ಮಂಚಿ, ಆಶಾ ಕಾರ್ಯಕರ್ತೆ ಶ್ರೀಮತಿ ಗೀತಾ, ಮುಕ್ಕ ಸೀ ಫುಡ್ ನ ಹಾಜಿ ಮುಹಮ್ಮದ್ ಶರೀಫ್, ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಿ.ಎಚ್.ಅಬೂಬಕ್ಕರ್ ಸೆರ್ಕಳ, ಹಾಜಿ ಮುಹಮ್ಮದ್ ರಫೀಕ್ ಸುರಿಬೈಲು, ರಫೀಕ್ ಕುವೈತ್, ಸುರಿಬೈಲು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಹಂಝ ಮಂಚಿಕಟ್ಟೆ ಕರೀಂ ಕದ್ಕಾರ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

  ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬ್ದುಲ್ ರಝಾಕ್ ಸುರಿಬೈಲು ಅವರನ್ನು ಸನ್ಮಾನಿಸಲಾಯಿತು.
ಗೌಸಿಯಾ ಅಸೋಸಿಯೇಷನ್‌ ನ ಪ್ರಮುಖರಾದ ಅಶ್ರಫ್ ಮಂಚಿ, ಮಹಮ್ಮದ್ ಮೂಸಾ, ಹನೀಫ್ ಎಂ.ಎ., ಹನೀಫ್ ಮಂಚಿ, ಕೆ.ಎಸ್.ಎ. ರಝಾಕ್, ಸಾದಿಕ್ ಸೂತ್ರಬೈಲು ಉಪಸ್ಥಿತರಿದ್ದರು

ಮಹಮ್ಮದ್ ಮಂಚಿ ಸ್ವಾಗತಿಸಿ, ಇಕ್ಬಾಲ್ ಮಂಚಿ ವಂದಿಸಿದರು. ನಝೀರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!