ಸುಳ್ಯ: ದೊಡ್ಡತೋಟ ಬಳಿ ಓಮ್ನಿ ಕಾರು ತೋಟಕ್ಕೆ ಉರುಳಿ ನಾಲ್ವರಿಗೆ ಗಾಯ
ಸುಳ್ಯ: ದೊಡ್ಡತೋಟ ಬಳಿ ಓಮ್ನಿಕಾರು ತೋಟಕ್ಕೆ ಉರುಳಿ ಬಿದ್ದು ಅದರಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ 3.30 ಕ್ಕೆ ನಡೆದಿದೆ.
ಬೈತಡ್ಕದ ಭರತ್ ಕುಮಾರ್ ರವರು ಬಾಲಕೃಷ್ಣ, ಗುಣಪಾಲ, ಮತ್ತು ದಿನೇಶರೊಂದಿಗೆ ಮಡಪ್ಪಾಡಿಗೆ ತುಪ್ಪದ ಕಾರ್ಯಕ್ರಮವೊಂದಕ್ಕೆ ಹೋಗಿ ಹಿಂತಿರುಗುವಾಗ ಈ ಘಟನೆ ನಡೆದಿದೆ. ನಾಲ್ವರಿಗೂ ಗಾಯಗೊಂಡಿದ್ದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




